ಕರ್ನಾಟಕ

karnataka

ETV Bharat / state

'ವಿಷಪೂರಿತ ಬೆಳೆ ತಿಂದು ಜಾನುವಾರು ಸತ್ತರೆ ನಾವು ಜವಾಬ್ದಾರರಲ್ಲ' - horticultural growers appeal to Tahsildar

ದನಕರುಗಳನ್ನು ಬಿಡಾಡಿಯಾಗಿ ಮೇಯುವುದಕ್ಕೆ ಬಿಡಬಾರದು ಎಂದು ಸೂಚಿಸುವಂತೆ ತೋಟಗಾರಿಕಾ ಬೆಳೆಗಾರರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Muddebihal
ತೋಟಗಾರಿಕಾ ಬೆಳೆಗಾರರಿಂದ ತಹಶೀಲ್ದಾರ್‌ಗೆ ಮನವಿ

By

Published : Apr 6, 2021, 10:40 AM IST

ಮುದ್ದೇಬಿಹಾಳ: ತಾಲೂಕಿನ ಕುಂಟೋಜಿ ಭಾಗದಲ್ಲಿ ಕೆಲವು ರೈತರು ತಮ್ಮ ಜಾನುವಾರುಗಳನ್ನು ಬಿಡಾಡಿಯಾಗಿ ಮೇಯುವುದಕ್ಕೆ ಬಿಡುವುದರಿಂದ ತೋಟಗಾರಿಕಾ ಬೆಳೆಗಳು ಹಾಳಾಗುತ್ತಿದ್ದು, ಸಂಬಂಧಿಸಿದವರಿಗೆ ತಾಲೂಕಾಡಳಿತ ವಿರುದ್ಧ ತಿಳಿವಳಿಕೆ ನೀಡುವಂತೆ ತೋಟಗಾರಿಕಾ ಬೆಳೆಗಾರರು ತಹಶೀಲ್ದಾರ್‌ಗೆ ಸೋಮವಾರ ಮನವಿ ಸಲ್ಲಿಸಿದರು.

ತೋಟಗಾರಿಕಾ ಬೆಳೆಗಾರರಿಂದ ತಹಶೀಲ್ದಾರ್‌ಗೆ ಮನವಿ

ಪಟ್ಟಣದ ತಹಶೀಲ್ದಾರ್ ಕಛೇರಿಗೆ ಆಗಮಿಸಿದ ತೋಟಗಾರಿಕಾ ಬೆಳೆಗಾರರು ಗ್ರೇಡ್-2 ತಹಶೀಲ್ದಾರ್ ಡಿ.ಜಿ.ಕಳ್ಳಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರೈತ ಬಸವಂತ ಹುಲಗಣ್ಣಿ ಹಾಗೂ ಮಲ್ಲಿಕಾರ್ಜುನ ಹೆಬ್ಬಾಳ, ಬೇಸಿಗೆ ಸಮಯದಲ್ಲಿ ನೀರಾವರಿ ಇಲ್ಲದ ಜಮೀನುಗಳ ರೈತರು ತಮ್ಮ ದನಕರುಗಳನ್ನು ಸೇರಿ ಹೊಡೆಯುತ್ತಾರೆ. ಇದರಿಂದ ತೋಟಗಾರಿಕಾ ಬೆಳೆಗಾರರಿಗೆ ಕಷ್ಟ ಬಂದೊದಗಿದೆ. ಮೊದಲೇ ಸಾಲ ಮಾಡಿ ಆತ್ಮಹತ್ಯೆಯಂತಹ ದಾರಿ ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಬೆಳೆದ ಕಬ್ಬು, ಗೋವಿನ ಜೋಳ ಹಾಗೂ ತೋಟಗಾರಿಕೆ ಬೆಳೆಗೆ ಕ್ರಿಮಿನಾಶಕ ಸಿಂಪಡನೆ ಮಾಡಿರುವಾಗ ಆ ಬೆಳೆಗಳನ್ನು ತಿಂದು ದನಕರುಗಳು ಸಾವನ್ನಪ್ಪುತ್ತಿವೆ.

ಆಗ ಜಗಳಕ್ಕೆ ಬರುವ ರೈತರು ದನಕರುಗಳ ಸಾವಿಗೆ ಪರಿಹಾರ ಕೊಡಲು ನೀಡುವಂತೆ ಜಗಳ ಮಾಡುತ್ತಾರೆ. ಆದ್ದರಿಂದ ಸಂಬಂಧಿಸಿದ ಪೊಲೀಸ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಡಂಗೂರ ಸಾರಿಸಿ ದನಕರುಗಳನ್ನು ಬಿಡಾಡಿಯಾಗಿ ಮೇಯುವುದಕ್ಕೆ ಬಿಡಬಾರದು ಎಂದು ಸೂಚಿಸುವಂತೆ ತೋಟಗಾರಿಕೆ ಬೆಳೆಗಾರರು ಒತ್ತಾಯಿಸಿದರು. ಒಂದು ವೇಳೆ ವಿಷಪೂರಿತ ಬೆಳೆ ತಿಂದು ಜಾನುವಾರುಗಳು ಸತ್ತರೆ ಅದಕ್ಕೆ ತಾವು ಹೊಣೆಗಾರರಲ್ಲ ಎಂದರು.

ABOUT THE AUTHOR

...view details