ಕರ್ನಾಟಕ

karnataka

ETV Bharat / state

ಗ್ರಾಪಂ ಚುನಾವಣೆ ಗೆಲ್ಲಲು ಪೊಲೀಸರ ಸಹಕಾರ, ಅಭ್ಯರ್ಥಿಯಿಂದ ಋಣ ಸಂದಾಯ!?: ವೈರಲ್‌ ಆದ ಫೋಟೋಗಳು

ಫೇಸ್​ಬುಕ್​​ನಲ್ಲಿ ಬಸವರಾಜ ಭಜಂತ್ರಿ ಎಂಬುವರು ಈ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ನಂತರ ತಮ್ಮ ತಪ್ಪಿನ ಅರಿವು ಆಗುತ್ತಿದ್ದಂತೆ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಚುನಾವಣೆಯಲ್ಲಿ ಅಭ್ಯರ್ಥಿ ಗೆಲುವಿಗೆ ಪೊಲೀಸರು ಕಾರಣ ಎಂದು ಸನ್ಮಾನಿಸಿರುವುದು ಹತ್ತು ಹಲವು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ..

vijayapura
ಪೊಲೀಸರಿಗೆ ಸನ್ಮಾನ

By

Published : Jan 3, 2021, 9:48 AM IST

ವಿಜಯಪುರ :ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಯೊಬ್ಬರು ತಮ್ಮ ಬೆಂಬಲಿಗರೊಂದಿಗೆ ಸೇರಿ ನನ್ನ ಗೆಲುವಿಗೆ ಪೊಲೀಸರೇ ಕಾರಣ ಎಂಬರ್ಥದಲ್ಲಿ ಪೊಲೀಸ್ ಠಾಣೆಗೆ ತೆರಳಿ ಪಿಎಸ್​ಐ ಸೇರಿ ಠಾಣೆಯ ಓರ್ವ ಪೊಲೀಸ್ ಸಿಬ್ಬಂದಿಯನ್ನು ಸನ್ಮಾನಿಸಿ, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಫೋಟೋಗಳು

ಇಂಥಹದೊಂದು ವಿಲಕ್ಷಣ ಪ್ರಸಂಗ ವಿಜಯಪುರ ಜಿಲ್ಲೆಯ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ. ತಾಳಿಕೋಟೆ ತಾಲೂಕಿನ ಬಳವಾಟ ಗ್ರಾಪಂಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಸನಗೌಡ ಸಾಸನೂರ ಎಂಬುವರು ಆಯ್ಕೆಯಾಗಿದ್ದರು.

ಈ ಗೆಲುವಿನ‌ ಶ್ರೇಯಸ್ಸನ್ನು ತಾಳಿಕೋಟೆ ಪೊಲೀಸರಿಗೆ ಅರ್ಪಿಸಿದ ವಿಜೇತ ಅಭ್ಯರ್ಥಿ ತನ್ನ ಬೆಂಬಲಿಗರೊಂದಿಗೆ ತೆರಳಿ ಠಾಣೆಯ ಪಿಎಸ್​ಐ ಜಿ ಜಿ ಬಿರಾದಾರ್ ಹಾಗೂ ಠಾಣೆಯ ಓರ್ವ ಸಿಬ್ಬಂದಿಯನ್ನು ಸ್ಮಾನಿಸಿ, ಸಿಹಿ ತಿನಿಸುವ ಮೂಲಕ ಪೊಲೀಸರಿಗೆ ಋಣ ಸಂದಾಯ ಮಾಡಿದ್ದಾರೆ.

ಓದಿ:'ಚುನಾವಣೆ ಪ್ರಕ್ರಿಯೆಯಂತೆ ಬೂತ್ ಮಟ್ಟದಲ್ಲಿ ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್'

ಅಷ್ಟೇ ಅಲ್ಲ, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಚುನಾವಣೆಯಲ್ಲಿ ನನ್ನ ಗೆಲುವಿಗೆ ಸಹಕರಿಸಿದ್ದಕ್ಕೆ ಠಾಣೆಯ ಸಿಬ್ಬಂದಿಯನ್ನು ಸನ್ಮಾನಿಸಿದ್ದಾಗಿ ಟ್ಯಾಗ್ ಸಹ ಮಾಡಲಾಗಿದೆ. ಈಗ ಇದು ಚರ್ಚೆಗೆ ಗ್ರಾಸವಾಗಿದೆ. ಚುನಾವಣೆ ಗೆಲ್ಲಲು ಪೊಲೀಸರ ಸಹಕಾರ ಎನ್ನುವ ಒಳ ಅರ್ಥ ಬೇರೆ ಸಂದೇಶ ನೀಡಿದಂತಾಗಿದೆ.

ಫೇಸ್​ಬುಕ್​​ನಲ್ಲಿ ಬಸವರಾಜ ಭಜಂತ್ರಿ ಎಂಬುವರು ಈ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ನಂತರ ತಮ್ಮ ತಪ್ಪಿನ ಅರಿವು ಆಗುತ್ತಿದ್ದಂತೆ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಚುನಾವಣೆಯಲ್ಲಿ ಅಭ್ಯರ್ಥಿ ಗೆಲುವಿಗೆ ಪೊಲೀಸರು ಕಾರಣ ಎಂದು ಸನ್ಮಾನಿಸಿರುವುದು ಹತ್ತು ಹಲವು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಈಗ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ABOUT THE AUTHOR

...view details