ವಿಜಯಪುರ:ಮಹಾಮಾರಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಪಾರಂಪರಿಕ ಹೊಳಿ ಹಬ್ಬ ಆಚರಣೆಗೆ ಜಿಲ್ಲಾಡಳಿತ ನಿಷೇಧ ಹೇರಿ ಆದೇಶ ಹೊರಡಿಸಿದೆ. ಆದರೆ ಶನಿವಾರ ರಾತ್ರಿ ಜಿಲ್ಲೆಯ ಕೆಲವೊಂದು ಪ್ರದೇಶಗಳಲ್ಲಿ ಕಾಮದಹನ ಮಾಡಿ, ಕೊರೊನಾ ಮಾರ್ಗಸೂಚಿ ಮುರಿಯಲಾಗಿದೆ.
ಜಿಲ್ಲಾಡಳಿತ ನಿಷೇಧಕ್ಕಿಲ್ಲ ಕಿಮ್ಮತ್ತು: ವಿಜಯಪುರದಲ್ಲಿ ಕಾಮದಹನ! - ಕೊರೊನಾ ವೈರಸ್ ವಿಜಯಪುರ
ಕೊರೊನಾ ವೈರಸ್ ಹಾವಳಿ ಜೋರಾಗಿರುವ ಕಾರಣ ಹೋಳಿ ಹಬ್ಬ ಆಚರಣೆ ನಿಷೇಧ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಹಾಕಿದೆ. ಆದರೆ ವಿಜಯಪುರದ ಕೆಲ ಪ್ರದೇಶಗಳಲ್ಲಿ ರಾತ್ರಿ ವೇಳೆ ಕಾಮದಹನ ಮಾಡಿರುವ ಘಟನೆ ನಡೆದಿವೆ.
![ಜಿಲ್ಲಾಡಳಿತ ನಿಷೇಧಕ್ಕಿಲ್ಲ ಕಿಮ್ಮತ್ತು: ವಿಜಯಪುರದಲ್ಲಿ ಕಾಮದಹನ! Holi Celebration in Vijaypur](https://etvbharatimages.akamaized.net/etvbharat/prod-images/768-512-11187066-740-11187066-1616873058252.jpg)
ಹುಣ್ಣಿಮೆ ರಾತ್ರಿ ಇಬ್ರಾಹಿಂಪುರದ ರಾಧಾಕೃಷ್ಣನಗರದ ಯುವಕರು ಸಂಪ್ರದಾಯಕವಾಗಿ ಕಾಮದಹನ ಮಾಡುವ ಮೂಲಕ ಹೊಳಿ ಹಬ್ಬಕ್ಕೆ ಚಾಲನೆ ನೀಡಿದ್ದಾರೆ. ಭಾನುವಾರ ಬಣ್ಣದಾಟ ನಡೆಯಲಿದ್ದು, ಏ.1ರಂದು ರಂಗಪಂಚಮಿ ನೇರವೇರಲಿದೆ. ಜಿಲ್ಲೆಯ ಕೆಲವು ಕಡೆಗಳಲ್ಲಿ ಹುಣ್ಣಿಮೆ ಆಗಮನ ದಿನ ಕಾಮದಹನ ಮಾಡಿದರೆ, ಇನ್ನೂ ಕೆಲವು ಕಡೆಗಳಲ್ಲಿ ಭಾನುವಾರ ರಾತ್ರಿಯೂ ಕಾಮದಹನ ಮಾಡಲಿದ್ದಾರೆ. ಅದಕ್ಕೆ ಅನುಸಾರವಾಗಿ ಬಣ್ಣದ ಹಬ್ಬ, ರಂಗ ಪಂಚಮಿ ನಡೆಯಲಿದೆ.ಯುವಕರು ಹಲಗೆ ಬಾರಿಸಿ ಅಲ್ಲಲ್ಲಿ ಕದ್ದು ತಂದಿದ್ದ ಕಟ್ಟಿಗೆಗಳನ್ನು ಜೋಡಿಸಿ ಸಂಪ್ರದಾಯಕವಾಗಿ ಕಾಮನ ದಹನ ಮಾಡುವ ಮೂಲಕ ಹಬ್ಬ ಆಚರಿಸಿದರು.
ಕೊರೊನಾ ಮಹಾಮಾರಿ ಹರಡದಂತೆ ಮುನ್ನಚ್ಚರಿಕೆ ಕ್ರಮವಾಗಿ ರಾಜ್ಯ ಸರ್ಕಾರದ ನಿರ್ದೇಶನದಂತೆ ಮಾ. 28 ರಿಂದ ಮಾ.31ರವರೆಗೆ ಹೊಳಿ ಹಬ್ಬ ಆಚರಣೆ ಮಾಡುವದನ್ನು ನಿಷೇಧಿಸಿ ಜಿಲ್ಲಾಡಳಿತ ನಿಷೇಧ ಹೇರಿದ್ದರೂ ಸಹ ಜಿಲ್ಲೆಯ ಕೆಲವು ಕಡೆ ಕಾಮದಹನ ಮಾಡಿ ಸಂಪ್ರದಾಯವನ್ನು ಮುಂದುವರೆಸಿದರು.