ವಿಜಯಪುರ :2002ರ ಡಿಸೆಂಬರ್ನಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂದು ಆಗ್ರಹಿಸಿ ಅಶೋಕ್ ಸಿಂಘಾಲ್ ನೇತೃತ್ವದಲ್ಲಿ ಕರೆ ನೀಡಿದ್ದ ಅಯೋಧ್ಯಾ ಚಲೋ ರ್ಯಾಲಿಯಲ್ಲಿ ಪಾಲ್ಗೊಳ್ಳಲು ವಿಜಯಪುರದಿಂದ ಹಿಂದೂ ಪರ ಸಂಘಟನೆಯ 170ಕ್ಕೂ ಹೆಚ್ಚು ಕಾರ್ಯಕರ್ತರು ಹೊರಡಲು ನಿರ್ಧರಿಸಿದ್ದರು. ಉತ್ತರಪ್ರದೇಶದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಕಂಡಲ್ಲಿ ಗುಂಡು ಆದೇಶವಿದ್ದ ಕಾರಣ, ಕಾರ್ಯಕರ್ತರ ಕುಟುಂಬ ವರ್ಗ ಅಯೋಧ್ಯೆಗೆ ಹೋಗದಂತೆ ಒತ್ತಾಯ ಹೇರಿದ್ದರು. ಆದರೆ, ಇದನ್ನು ಲೆಕ್ಕಿಸದೆ ಹಿಂದೂ ಕಾರ್ಯಕರ್ತರು ಅಯೋಧ್ಯೆಗೆ ತೆರಳಿದ್ದರು.
ಕಂಡಲ್ಲಿ ಗುಂಡು ಆದೇಶ ಲೆಕ್ಕಿಸದೆ ಅಯೋಧ್ಯೆ ತಲುಪಿದ್ದೆವು.. ನೆನಪು ಹಂಚಿಕೊಂಡ ಹಿಂದೂ ಮುಖಂಡರು - ಅಯೋಧ್ಯೆ ರಾಮ ಮಂದಿರ ಶಿಲಾನ್ಯಾಸ
ವಿಶ್ವ ಹಿಂದೂ ಪರಿಷತ್ ಮುಖಂಡರಾದ ಶ್ರೀಮಂತ ದುದ್ದಗಿ, ವಿಜಯ ಜೋಶಿ, ಕಾಶಿನಾಥ ಮಸಿಬನಾಳ ಸೇರಿ ನೂರಾರು ಕಾರ್ಯಕರ್ತರು, ಮುಖಂಡರು ಅಯೋಧ್ಯೆಗೆ ರೈಲು ಮುಖಾಂತರ ಹೋಗಿದ್ದರು..
ಅಯೋಧ್ಯೆ ತಲುಪಿದ ನೆನೆಪು ಹಂಚಿಕೊಂಡ ಹಿಂದೂ ಮುಖಂಡರು
ವಿಶ್ವ ಹಿಂದೂ ಪರಿಷತ್ ಮುಖಂಡರಾದ ಶ್ರೀಮಂತ ದುದ್ದಗಿ, ವಿಜಯ ಜೋಶಿ, ಕಾಶಿನಾಥ ಮಸಿಬನಾಳ ಸೇರಿ ನೂರಾರು ಕಾರ್ಯಕರ್ತರು, ಮುಖಂಡರು ಅಯೋಧ್ಯೆಗೆ ರೈಲು ಮುಖಾಂತರ ಹೋಗಿದ್ದರು. ಇವರನ್ನು ಸುಲ್ತಾನಪುರದಲ್ಲಿ ಬಂಧಿಸಿ, ಬಳಿಕ ಕೆಲ ಷರತ್ತುಗಳೊಂದಿಗೆ ಬಿಡುಗಡೆ ಮಾಡಲಾಗಿತ್ತು. ಬಳಿಕ ಕಣ್ತಪ್ಪಿಸಿ ಅಯೋಧ್ಯೆಗೆ ತಲುಪಿ ರಾಮ ಮಂದಿರ ನಿರ್ಮಾಣದ ಸಂಕಲ್ಪ ಮಾಡಿದ್ದರು. ಕೊನೆಗೂ ಇವರೆಲ್ಲರ ಕನಸು ನನಸಾಗಿದೆ. ಇಂದು ಅಯೋಧ್ಯೆ ರಾಮ ಮಂದಿರಕ್ಕೆ ಅಡಿಗಲ್ಲು ಹಾಕಲಾಗಿದೆ.