ವಿಜಯಪುರ:ಫೆಬ್ರವರಿ 20ರಂದು ನಡೆದ ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ನಗರದಲ್ಲಿಂದು ಪ್ರತಿಭಟನೆ ನಡೆಯಿತು. ಈ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಹಿಂದೂ ಮುಖಂಡರೊಬ್ಬರು ಲೈಸೆನ್ಸ್ ಹೊಂದಿರುವ ಗನ್ ಸಮೇತ ಪಾಲ್ಗೊಂಡು ವಿವಾದಕ್ಕೆ ಗುರಿಯಾಗಿದ್ದಾರೆ.
ಹಿಂದೂ ಮುಖಂಡ ರಾಘವ ಅಣ್ಣಿಗೇರಿ ಎಂಬುವರು ಪ್ರತಿಭಟನೆಯಲ್ಲಿ ಪಾಲ್ಗೊಂಡ ವೇಳೆ ಸೊಂಟದಲ್ಲಿ ಲೈಸೆನ್ಸ್ ಗನ್ ಇಟ್ಟುಕೊಂಡಿದ್ದರು. ಇದು ಕ್ಯಾಮರಾ ಕಣ್ಣಿಗೆ ಬಿದ್ದಿದೆ. ರಾಘವ ಅಣ್ಣಿಗೇರಿ ಅವರಿಗೆ ಜೀವ ಬೆದರಿಕೆ ಇರುವ ಕಾರಣ ಜಿಲ್ಲಾಡಳಿತದಿಂದ ಲೈಸೆನ್ಸ್ ಪಡೆದುಕೊಂಡಿದ್ದಾರೆ ಎನ್ನಲಾಗ್ತಿದೆ.