ವಿಜಯಪುರ:ಜಿಲ್ಲೆಯಲ್ಲಿ ಕೊರೊನಾ ಭೀತಿ ನಡುವೆಯೂ ಮಹಾರಾಷ್ಟ್ರದಿಂದ ಯುವತಿಯರನ್ನು ಕರೆಯಿಸಿ ಕೆಲ ದಂಧೆಕೋರರು ವೇಶ್ಯಾವಾಟಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಮನೆಯಲ್ಲೇ ಹೈಟೆಕ್ ವೇಶ್ಯಾವಾಟಿಕೆ ನಗರದಲ್ಲಿ ಮುಂಬೈ, ಪುಣೆಯಿಂದ ಯುವತಿಯರನ್ನು ಕರೆಯಿಸಿ ವೇಶ್ಯಾವಾಟಿಕೆ ಮಾಡಿದ ಆರೋಪ ಕೇಳಿ ಬಂದಿದೆ. ಕೊರೊನಾ ವ್ಯಾಪಕವಾಗಿ ಹರಡಿರುವ ಈ ವೇಳೆ ಮಹಾರಾಷ್ಟ್ರದಿಂದ ಯುವತಿಯರನ್ನು ಕರೆಯಿಸಿ ವೇಶ್ಯಾವಾಟಿಕೆ ನಡೆಸ್ತಿದ್ದು, ಕೊರೊನಾ ಮತ್ತಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ.
ವಿಜಯಪುರದ ಗಾಂಧಿನಗರದಲ್ಲಿ ಭರ್ಜರಿ ಮಾಂಸ ದಂಧೆಯಲ್ಲಿ ತೊಡಗಿದವರನ್ನು ಪ್ರಶ್ನಿಸಲು ಹೋಗಿದ್ದವರ ಮೇಲೆ ಆವಾಜ್ ಹಾಕಲಾಗಿದೆ. ಕೊರೊನಾ ತಾಣವಾಗಿರುವ ಮಹಾರಾಷ್ಟ್ರದಿಂದ ಯುವತಿಯರನ್ನು ಕರೆಯಿಸಿ ವೇಶ್ಯಾವಾಟಿಕೆ ಮಾಡಿಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಕೆಲ ಪ್ರತಿಷ್ಠಿತ ಬಡಾವಣೆಯಲ್ಲಿ ಈ ದಂಧೆ ನಡೆಯುತ್ತಿದೆ. ಇದನ್ನು ಪ್ರಶ್ನಿಸಲು ಹೋದ ಸ್ಥಳೀಯರಿಗೆ ದಂಧೆಕೋರರು ಬೆದರಿಕೆ ಹಾಕ್ತಿದ್ದಾರೆ ಎನ್ನಲಾಗಿದೆ.
ಮನೆಯಲ್ಲಿ ಹೆಣ್ಣು ಮಕ್ಕಳಿದ್ದಾರೆ. ಈ ರೀತಿ ನಮ್ಮ ಬಡಾವಣೆಯಲ್ಲಿ ವೇಶ್ಯಾವಾಟಿಕೆ ನಡೆಸುವುದರಿಂದ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ತಕ್ಷಣ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.