ವಿಜಯಪುರ :ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣ ವೀಕ್ಷಣೆಗೆ ಪ್ರವಾಸಿಗರನ್ನು ಸೆಳೆಯಲು ಜಿಲ್ಲಾಧಿಕಾರಿ ಭಾನುವಾರ ಪಾರಂಪರಿಕ (ಹೆರಿಟೇಜ್) ನಡಿಗೆ ನಡೆಸಿದರು.
ನಗರದ ಹೊರವಲಯದ ತೊರವಿಯ ನವರಸಪುರದ ಸಂಗೀತ ಮಹಲ್ ಹಾಗೂ ನಾರಿ ಮಹಲ್ ಪ್ರವಾಸಿ ತಾಣಗಳನ್ನು ವೀಕ್ಷಿಸಿದರು. ವಿಜಯಪುರ ಸುತ್ತಮುತ್ತಲು ಸುಮಾರು 84 ಆದಿಲ್ಶಾಹಿ ನಿರ್ಮಿಸಿದ ಪಾರಂಪರಿಕ ಪ್ರವಾಸಿ ತಾಣಗಳು ಇವೆ. ಇವುಗಳನ್ನು ರಕ್ಷಿಸಿ ಅದರ ಸೌಂದರ್ಯ ಮತ್ತು ಆಕರ್ಷಣೆಯನ್ನು ಬರುವ ಪ್ರವಾಸಿಗರಿಗೆ ಉಣಬಡಿಸುವ ಉದ್ದೇಶ ಈ ಪಾರಂಪರಿಕ ನಡಿಗೆಯದ್ದಾಗಿದೆ.
ಈ ಮೂಲಕ ಗುಮ್ಮಟನಗರಿ ವ್ಯಾಪಾರ, ವಹಿವಾಟು, ಸ್ವಂತ ಉದ್ಯೋಗ ಸೃಷ್ಠಿಸುವ ಕೆಲಸ ಈ ಮೂಲಕ ಮಾಡಬೇಕಾಗಿದೆ. ಪ್ರತಿ ತಿಂಗಳು ಮೂರನೇ ಭಾನುವಾರ ಪಾರಂಪರಿಕ ನಡಿಗೆ ಮಾಡಲು ಉದ್ದೇಶಿಸಲಾಗಿದೆ.
ನವರಸ ಮಹಲ್ ನಿರ್ಮಾಣ..ಜಿಲ್ಲಾಧಿಕಾರಿ ಪಿ. ಸುನೀಲ್ಕುಮಾರ್ ಅವರು ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆಯ ಅಧಿಕಾರಿಗಳ ತಂಡ ಮೊದಲು ನಾರಿಮಹಲ್ ವೀಕ್ಷಿಸಿದರು. ಸ್ಥಳೀಯ ಗೈಡ್ಗಳು ಇದರ ನಿರ್ಮಾಣದ ಹಿಂದಿನ ಉದ್ದೇಶ, ಸ್ಥಾಪನೆ ಯಾವ ಕಾಲದಲ್ಲಿ ನಡೆದಿದೆ. ಸದ್ಯದ ಅದರ ಪರಿಸ್ಥಿತಿಯನ್ನು ಸವಿವರವಾಗಿ ಮಾಹಿತಿ ನೀಡಿದರು. ನಂತರ ಆದಿಲ್ ಶಾಹಿ ಕಾಲದಲ್ಲಿ ಸಂಗೀತಕ್ಕೆ ಎಷ್ಟು ಮಹತ್ವ ನೀಡುತ್ತಿದ್ದರು. ಸಂಗೀತ ಕಚೇರಿ ನಡೆಸಲು ನವರಸ ಮಹಲ್ ನಿರ್ಮಾಣ ಮಾಡಿರುವ ಕುರಿತು ಮಾಹಿತಿ ನೀಡಿದರು.
ಈ ಬಗ್ಗೆ ಡಿಸಿ ಸುನೀಲ್ಕುಮಾರ್ ಮಾತನಾಡಿ, ಬರುವ ಪ್ರವಾಸಿಗರು ನಗರದಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ವೀಕ್ಷಿಸಿ ಅದರ ಮಾಹಿತಿ ನೀಡುವ ಉದ್ದೇಶದಿಂದ ವ್ಯಾಕ್ಸಿನ್ ಕೇಂದ್ರ ಸ್ಥಾಪನೆ ಮಾಡುವ ಉದ್ದೇಶ ಹೊಂದಲಾಗಿದೆ. ದೇಶ, ವಿದೇಶಗಳಿಂದ ಬರುವ ಪ್ರವಾಸಿಗರಿಗೆ ನಮ್ಮ ಜಿಲ್ಲೆಯ ಪಾರಂಪರಿಕ ಸ್ಮಾರಕ ವೀಕ್ಷಣೆ ಜತೆ ಮಾಹಿತಿ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.