ಕರ್ನಾಟಕ

karnataka

By

Published : Apr 4, 2021, 4:19 PM IST

ETV Bharat / state

ವಿಜಯಪುರ ಡಿಸಿಯಿಂದ 'ಹೆರಿಟೇಜ್ ವಾಕ್' : ಪಾರಂಪರಿಕ ತಾಣಗಳ ಮೂಲಸೌಕರ್ಯ ಪರಿಶೀಲನೆ

ಜಿಲ್ಲಾಸ್ಪತ್ರೆಯ ಬಳಿಯ ನಿತ್ಯ ನವ್ರಿ ಸ್ಮಾರಕಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಅಲ್ಲಿನ ಬಾವಿಯ ನೀರನ್ನು ಸದ್ಬಳಕೆ ಮಾಡಲು ಜಿಲ್ಲಾಸ್ಪತ್ರೆಯ ಸರ್ಜನ್ ತಿಳಿಸಿದರು ಮತ್ತು ಶುಚಿತ್ವ ಕಾಪಾಡಿಕೊಳ್ಳಲು ಸಲಹೆ ನೀಡಿದರು..

'Heritage Walk' by Vijayapura DC
ಪಾರಂಪರಿಕ ತಾಣಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ

ವಿಜಯಪುರ : 'ಹೆರಿಟೇಜ್ ವಾಕ್ 'ಅಂಗವಾಗಿ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ನಗರದ ಐತಿಹಾಸಿಕ ಆದಿಲ್ ಶಾಹಿ ಕಾಲದ ವಿವಿಧ ಸ್ಮಾರಕಗಳಿಗೆ ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದರು.

ಎರಡನೆಯ ಬಾರಿಗೆ ಹೆರಿಟೇಜ್ ವಾಕ್ ನಡೆಸಿದ ಜಿಲ್ಲಾಧಿಕಾರಿ, ನಗರದ ಸಾತ್ ಖಬರ್, ಸುರಂಗ ಬೌಡಿ, ಜಿಲ್ಲಾಸ್ಪತ್ರೆ ಹತ್ತಿರದ ನಿತ್ಯ ನವ್ರಿ ಸ್ಮಾರಕ, ಚಾಂದ್ ಬೌಡಿ, ಇಬ್ರಾಹಿಂ ರೋಜಾ, ಮಲಿಕ್ ಮೈದಾನ್ ತೊಪ್, ಉಪರಿ ಬುರುಜ್ ಸೇರಿ ಒಟ್ಟು ಏಳು ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡಿ, ಅಲ್ಲಿನ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು.

ಪಾರಂಪರಿಕ ತಾಣಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ

ಮೊದಲನೆಯದಾಗಿ ಐತಿಹಾಸಿಕ ಸಾತ್ ಖಬರ್​​ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಅಲ್ಲಿಯ ನಿರ್ವಹಣೆಯ ಬಗ್ಗೆ ವಿಷಾದಿಸಿದರು. ಮೂಲಸೌಕರ್ಯ ಇಲ್ಲದಿರುವುದನ್ನು ಗಮನಿಸಿದ ಅವರು, ಸರಿಯಾದ ರಸ್ತೆ ನಿರ್ಮಾಣ, ಸೂಚನಾ ಫಲಕಗಳ ಅಳವಡಿಕೆ ಹಾಗೂ ಲೈಟಿಂಗ್ ವ್ಯವಸ್ಥೆಗೆ ಕ್ರಮಕೈಗೊಳ್ಳುವಂತೆ ಹೇಳಿದರು. ಅಲ್ಲದೆ, ಭೂ ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಓದಿ : ರಾಜ್ಯದ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ.. ಆದರೆ, ಕಲಬುರ್ಗಿ ಜಿಲ್ಲೆ ಸ್ಥಿತಿ ಹೀಗಿದೆ..

ಭೂಗತ ಜಲಮಾರ್ಗ ಪ್ರಾಚೀನ ಕರೇಜ್ ವ್ಯವಸ್ಥೆಯ ಮೂಲ ಸ್ಥಳ ವೀಕ್ಷಿಸಿದ ಡಿಸಿ, ನೂತನ ಪ್ರವಾಸಿ ಮಂದಿರ ವ್ಯಾಪ್ತಿಯಲ್ಲಿನ ಕರೇಜ್ ಅಭಿವೃದ್ದಿಯ ಬಗ್ಗೆ ಕ್ರಮಕೈಗೊಳ್ಳುವ ಚಿಂತನೆಯಿದೆ ಎಂದು ತಿಳಿಸಿದರು.

ಜಿಲ್ಲಾಸ್ಪತ್ರೆಯ ಬಳಿಯ ನಿತ್ಯ ನವ್ರಿ ಸ್ಮಾರಕಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಅಲ್ಲಿನ ಬಾವಿಯ ನೀರನ್ನು ಸದ್ಬಳಕೆ ಮಾಡಲು ಜಿಲ್ಲಾಸ್ಪತ್ರೆಯ ಸರ್ಜನ್ ತಿಳಿಸಿದರು ಮತ್ತು ಶುಚಿತ್ವ ಕಾಪಾಡಿಕೊಳ್ಳಲು ಸಲಹೆ ನೀಡಿದರು.

ಇಬ್ರಾಹಿಂ ರೋಜಾಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಅಲ್ಲಿನ ನಿರ್ವಹಣೆಯ ಮತ್ತು ಸಮಸ್ಯೆ ಬಗ್ಗೆ ತಿಳಿದುಕೊಂಡು ಉದ್ಯಾನವನ ನಿರ್ವಹಣೆಗೆ ಸಿಬ್ಬಂದಿ ಕೊರತೆ ಮನಗಂಡು ಹೊರಗುತ್ತಿಗೆಯ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಲು ತಿಳಿಸಿದರು.

ಮಲಿಕ್ ಮೈದಾನ್ ತೊಪ್ ಮತ್ತು ವಿಜಯಪುರದ ವೀವ್ ಪಾಯಿಂಟ್ ಆದ ಉಪಲ್ ಬುರ್ಜ್​ಗೆ ಭೇಟಿ ನೀಡಿ, ಜನರನ್ನು ಆಕರ್ಷಿಸಲು ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ, ಉಪವಿಭಾಗಾಧಿಕಾರಿ ಬಲರಾಮ್ ಲಮಾಣಿ, ನಗರಾಭಿವೃಧ್ಧಿಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ್ ಮೆಕ್ಕಳಕಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ಭಜಂತ್ರಿ, ಪೀಟರ್ ಅಲೆಕ್ಸಾಂಡರ್, ಅಮೀನ್ ಹುಲ್ಲೂರ ಉಪಸ್ಥಿತರಿದ್ದರು.

ABOUT THE AUTHOR

...view details