ವಿಜಯಪುರ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಇಂದು ಸುರಿದ ಭಾರಿ ಮಳೆಯಿಂದ ಹಳ್ಳ ಕೊಳ್ಳಗಳು ತುಂಬಿ ಹರಿದಿವೆ. ನಗರ ಪ್ರದೇಶದಲ್ಲಿ ಮಳೆಯಿಂದ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಭಾರೀ ಮಳೆ - ವಿಜಯಪುರ ಜಿಲ್ಲೆಯಲ್ಲಿ ಭಾರೀ ಮಳೆ
ವಿಜಯಪುರ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗಿದೆ. ಜಿಲ್ಲೆಯ ಹಿಟ್ನಳ್ಳಿಯಲ್ಲಿ 35 ಮೀಲಿ ಮೀಟರ್, ಭೂತನಾಳ 9, ಮನಗೂಳಿ 8 ಮಿ.ಮೀಟರ್ ಮಳೆಯಾಗಿದೆ.

ಗುರುವಾರ ಬೆಳಗ್ಗೆಯಿಂದ ಸುರಿದ ಭಾರಿ ಮಳೆ ನಗರದ ಜನ ಜೀವನ ಅಸ್ತವ್ಯಸ್ತವಾಗಿಸಿತ್ತು. ವಿಜಯಪುರ ನಗರದಲ್ಲಿಯೇ 24 ಗಂಟೆಯಲ್ಲಿ 4.8 ಮಿ.ಮೀಟರ್ ಮಳೆಯಾಗಿದ್ದರೆ, ನಗರದ ಸುತ್ತಮುತ್ತಲಿನ ಹಿಟ್ನಳ್ಳಿ ಭೂತನಾಳ ಮನಗೂಳಿಯಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ. ಹಿಟ್ನಳ್ಳಿಯಲ್ಲಿ 35 ಮೀಲಿ ಮೀಟರ್, ಭೂತನಾಳ 9, ಮನಗೂಳಿ 8 ಮಿ.ಮೀಟರ್ ಮಳೆಯಾಗಿದೆ.
ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರಗಳಾದ ಮುದ್ದೇಬಿಹಾಳ 2, ಸಿಂದಗಿ 2, ದೇವರಹಿಪ್ಪರಗಿ 1.6, ಆಲಮೇಲ 2.5, ತಾಳಿಕೋಟೆ 15.1, ಢವಳಗಿ 27, ಇಂಡಿ ಪಟ್ಟಣ 1, ಇಂಡಿ ತಾಲೂಕಿನ ಅಗರಖೇಡ 2, ಚಡಚಣ 7.4, ಝಳಕಿ 18.6, ಬಸವನಬಾಗೇವಾಡಿ 3.8, ನಾಗಠಾಣ 9.2, ತಿಕೋಟಾ 14.2 ಮೀಲಿ ಮೀಟರ್ ಮಳೆಯಾಗಿದೆ.