ವಿಜಯಪುರ : ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ನಗರದ ಅಪ್ಸರಾ ಚಲನಚಿತ್ರ ಮಂದಿರದ ಆವರಣ ಜಲಾವೃತಗೊಂಡಿದೆ. ಮಧ್ಯಾಹ್ನ ಚಲನಚಿತ್ರ ವೀಕ್ಷಿಸಲು ಆಗಮಿಸಿದ್ದ ಜನರು ಹೊರಗಡೆ ನಿಲ್ಲಿಸಿದ್ದ ವಾಹನಗಳು ಮುಳುಗಡೆಯಾಗಿವೆ. ಇದರಿಂದಾಗಿ ಚಲನಚಿತ್ರ ಮುಗಿದ ಬಳಿಕ ವಾಹನವನ್ನು ಹೊರ ತೆಗೆಯಲು ಜನರು ಹರಸಾಹಸ ಪಡುವಂತಾಯಿತು.
ವಿಜಯಪುರದಲ್ಲಿ ಭಾರಿ ಮಳೆ.. ಚಿತ್ರಮಂದಿರ ಆವರಣಕ್ಕೆ ನುಗ್ಗಿದ ನೀರು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಸುಮಾರು 3 ಗಂಟೆಗಳ ಕಾಲ ಸುರಿದ ಭಾರಿ ಮಳೆಯಿಂದ ಜನರ ಮನೆ ಬಿಟ್ಟು ಹೊರಗೆ ಬರಲಾಗದೇ ತೊಂದರೆ ಅನುಭವಿಸುವಂತಾಯಿತು.
ವಿದ್ಯುತ್ ಕಡಿತ : ಈ ಮಧ್ಯೆ ಭಾರಿ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿತ್ತು. ಅಲ್ಲದೇ ಇಲ್ಲಿನ ಗಾಂಧಿಚೌಕ್, ಬಸವೇಶ್ವರ ಸರ್ಕಲ್, ಶಿವಾಜಿ ಚೌಕ್ ಸೇರಿದಂತೆ ನಗರದ ಹಲವೆಡೆ ರಸ್ತೆ ತುಂಬೆಲ್ಲಾ ನೀರು ಹರಿದು ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡುವಂತಾಗಿತ್ತು.
ಉಪವಿಭಾಗಾಧಿಕಾರಿ ಭೇಟಿ: ನಗರದಲ್ಲಿ ಸುರಿದ ಭಾರಿ ಮಳೆಯಿಂದ ಉಂಟಾದ ಮಳೆಹಾನಿಯನ್ನು ವೀಕ್ಷಿಸಲು ಉಪವಿಭಾಗಾಧಿಕಾರಿ ರಾಕೇಶ ಜೈನಾಪುರ ಸ್ಥಳಕ್ಕೆ ಭೇಟಿ ನೀಡಿದರು. ನಗರದ ಅಪ್ಸರಾ ಚಿತ್ರಮಂದಿರಕ್ಕೆ ಭೇಟಿ ನೀಡಿದ ಅವರು ಬಳಿಕ ಶಹಾಪೇಟೆ ಬಡಾವಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ :ಬೆಂಗಳೂರಿಗೆ ಬಿಡುವು ಕೊಟ್ಟ ಮಳೆ: ಯಥಾಸ್ಥಿತಿಗೆ ಸಿಲಿಕಾನ್ ಸಿಟಿ