ವಿಜಯಪುರ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮುದ್ದೇಬಿಹಾಳ ತಾಲೂಕಿನ ಚವನಭಾವಿ ನಾಲತವಾಡ ರಸ್ತೆ ಸಂಪರ್ಕ ಬಂದ್ ಆಗಿದೆ.
ವಿಜಯಪುರದಲ್ಲಿ ಭಾರಿ ಮಳೆ: ರಸ್ತೆ ಸಂಪರ್ಕ ಕಡಿತ, ಹಲವೆಡೆ ಅವಾಂತರ - etv bharat kannada
ವಿಜಯಪುರ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹಲವೆಡೆ ಅವಾಂತರ ಸೃಷ್ಟಿಯಾಗಿದೆ.
![ವಿಜಯಪುರದಲ್ಲಿ ಭಾರಿ ಮಳೆ: ರಸ್ತೆ ಸಂಪರ್ಕ ಕಡಿತ, ಹಲವೆಡೆ ಅವಾಂತರ heavy-rain-in-vijayapura](https://etvbharatimages.akamaized.net/etvbharat/prod-images/768-512-16697758-thumbnail-3x2-news.jpg)
ವಿಜಯಪುರದಲ್ಲಿ ಭಾರಿ ಮಳೆ: ರಸ್ತೆ ಸಂಪರ್ಕ ಕಡಿತ, ಹಲವೆಡೆ ಅವಾಂತರ
ಮಳೆಯಿಂದ ಹಳ್ಳದ ನೀರು ತುಂಬಿ ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ. ತಾಳಿಕೋಟೆ ಚವನಭಾವಿ ನಾಲತವಾಡ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. 108 ಆ್ಯಂಬುಲೆನ್ಸ್ ವಾಹನ ಓಡಾಟಕ್ಕೂ ಸಾಧ್ಯವಾಗದೇ ತುರ್ತು ಚಿಕಿತ್ಸೆಗೂ ತೊಂದರೆಯಾಗಿದೆ. ಕೆಲಸಕ್ಕಾಗಿ ಬೇರೆ ಊರುಗಳಿಗೆ ತೆರಳುವ ಜನರು ತುಂಬಿ ಹರಿಯುತ್ತಿರುವ ಹಳ್ಳದ ನೀರಿನಿಂದ ಪರದಾಡುವಂತಾಗಿದೆ.
ವಿಜಯಪುರದಲ್ಲಿ ಭಾರಿ ಮಳೆ
ಇದನ್ನೂ ಓದಿ:ಭಾರಿ ಮಳೆಗೆ ಗೋಡೆ ಕುಸಿದು ಹಲವಾರು ಕಾರುಗಳು ಜಖಂ.. ಕೃತಕ ಜಲಪಾತ ಸೃಷ್ಟಿ, ರಸ್ತೆಯಲ್ಲೇ ನಿಂತ ನೀರು!
Last Updated : Oct 20, 2022, 1:48 PM IST