ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಭಾರಿ ಮಳೆ: ಮನೆಯ ಮೇಲ್ಛಾವಣಿ ಕುಸಿತ, ಬೀದಿಗೆ ಬಿದ್ದ ವೃದ್ಧೆ - ಮಳೆ

ವಿಜಯಪುರದಲ್ಲಿ ಸುರಿದ ಮಳೆಗೆ ಇಬ್ರಾಹಿಂಪುರ‌‌ ಕಾಲೋನಿಯಲ್ಲಿ ವೃದ್ಧೆಯೊಬ್ಬರ ಮನೆಯ ಮೇಲ್ಛಾವಣೆ ಕುಸಿತಗೊಂಡಿದೆ. ಇದರಿಂದ ವೃದ್ಧೆ ಮನೆಯಿಲ್ಲದೇ ಸಂಕಷ್ಟದಲ್ಲಿದ್ದಾರೆ.

ಮನೆಯ ಮೇಲ್ಛಾವಣಿ ಕುಸಿತ
ಮನೆಯ ಮೇಲ್ಛಾವಣಿ ಕುಸಿತ

By

Published : Oct 11, 2022, 2:23 PM IST

ವಿಜಯಪುರ: ತಡರಾತ್ರಿ ಸುರಿದ ಮಳೆಗೆ ಹಲವು ಕಡೆಗಳಲ್ಲಿ ಆವಾಂತರ‌ ಸೃಷ್ಟಿಯಾಗಿದೆ. ‌ನಗರದ ಇಬ್ರಾಹಿಂಪುರ‌‌ ಕಾಲೋನಿಯಲ್ಲಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ, ವೃದ್ಧೆಯೊಬ್ಬರು ಸೂರಿಲ್ಲದೇ ಪರಿತಪಿಸುತ್ತಿದ್ದಾರೆ. ಇಂದಿರಾಬಾಯಿ ಎಂಬ ವೃದ್ಧೆಯ ಮನೆ ಮೇಲ್ಛಾವಣಿ ಕುಸಿತಗೊಂಡಿದೆ.

ಮುಂಭಾಗದ ಕೋಣೆಯಲ್ಲಿ ಮಲಗಿದ್ದ ವೇಳೆ ಹಿಂಬದಿ ಕೋಣೆ ಮೇಲ್ಛಾವಣಿ ಕುಸಿತವಾಗಿದೆ. ಕಾರಣ ವೃದ್ದೆ ಇಂದಿರಾಬಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ‌ಮೇಲ್ಛಾವಣಿ ಕುಸಿತದಿಂದ ದಿನ ಬಳಕೆಯ ವಸ್ತುಗಳು ಮಣ್ಣಿನಡಿ ಸಿಲುಕಿ ಹಾನಿಗೊಳಗಾಗಿವೆ. ನನಗೆ ಸರ್ಕಾರ ಪರಿಹಾರ ಕೊಡಲಿ ಎಂದು ವೃದ್ಧೆ ಇಂದಿರಾಬಾಯಿ ಕಣ್ಣೀರು ಹಾಕಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಹಳ್ಳದಲ್ಲಿ ಸಿಲುಕಿಕೊಂಡ ಟ್ರ್ಯಾಕ್ಟರ್, ಕಾರ್ಮಿಕರು ಅಪಾಯದಿಂದ ಪಾರು

ABOUT THE AUTHOR

...view details