ವಿಜಯಪುರ :ಗುಮ್ಮಟನಗರಿಯಲ್ಲಿ ಇಂದು ಏಕಾಏಕಿ ಧಾರಾಕಾರ ಮಳೆ ಸುರಿದಿದೆ. ಸ್ಟೇಷನ್ ರಸ್ತೆ, ಕೇಂದ್ರ ಬಸ್ ನಿಲ್ದಾಣ, ಶಾ ಪೇಟೆ, ಜಲ ನಗರ ಸೇರಿದಂತೆ ನಗರದ ಬಹುತೇಕ ಭಾಗಗಳಲ್ಲಿ ವರಣ ತನ್ನ ಆರ್ಭಟ ತೋರಿಸಿದ್ದಾನೆ.
ಗುಮ್ಮಟನಗರಿಯಲ್ಲಿ ನೋಡ-ನೋಡ್ತಿದ್ದಂತೆ ಆರಂಭವಾದ ಮಳೆ! - Heavy Rain
ಗುಮ್ಮಟನಗರಿ ವಿಜಯಪುರದಲ್ಲಿ ನೋಡ-ನೋಡ್ತಿದ್ದಂತೆ ಆರಂಭವಾದ ಮಳೆ ಧಾರಾಕಾರವಾಗಿ ಸುರಿದಿದೆ. ಜಿಲ್ಲಾದ್ಯಂತ ತೊಗರಿ ಬೆಳೆಯುತ್ತಿರುವ ರೈತರಿಗೆ ಇಂದಿನ ಮಳೆ ವರದಾನವಾಗಲಿದೆ ಎನ್ನಲಾಗುತ್ತಿದೆ.
ಬೆಳಗಿನಿಂದಲೂ ನಗರದಲ್ಲಿ ಮೈಸುಡುವ ಬಿಸಿಲಿತ್ತು. ಆದ್ರೆ ಮಧ್ಯಾಹ್ನವಾಗುತ್ತಿದ್ದಂತೆ ಮೋಡ ಕವಿದ ವಾತಾವಣ ನಿರ್ಮಾಣವಾಗಿದ್ದರಿಂದ ಧಾರಾಕಾರ ಮಳೆ ಸುರಿಯತೊಡಗಿತು. ಮಳೆರಾಯನ ಆರ್ಭಟದಿಂದ ರಕ್ಷಣೆ ಪಡೆಯಲು ಜನರು ಪಕ್ಕದ ಅಂಗಡಿಗಳ ಆಶ್ರಯ ಪಡೆದುಕೊಂಡರು.
ಕಪ್ಪು ಮೋಡಗಳನ್ನು ನೋಡಿದರೆ ಸಂಜೆವರಿಗೂ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನು ಸುರಿಯುತ್ತಿರುವ ಮಳೆಯಿಂದ ಒಳ ಚರಂಡಿಗಳು ತುಂಬಿದ್ದು ಇಲ್ಲಿನ ಎಲ್ಐಸಿ ಕಚೇರಿಗೆ ನೀರು ನುಗ್ಗಿದೆ. ತಗ್ಗು ಪ್ರದೇಶವೆಲ್ಲ ನೀರಿನಿಂದ ಭರ್ತಿಯಾಗಿವೆ. ಜಿಲ್ಲಾದ್ಯಂತ ತೊಗರಿ ಬೆಳೆಯುತ್ತಿರುವ ರೈತರಿಗೆ ಇಂದಿನ ಮಳೆ ವರದಾನವಾಗಲಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಬಿಸಿಲಿನ ಬೇಗೆಯಲ್ಲಿ ಓಡಾಡುತ್ತಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ.