ಮುದ್ದೇಬಿಹಾಳ: ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಒಂದಿಲ್ಲೊಂದು ಅನಾಹುತ ನಡೆಯುತ್ತಿವೆ. ತಾಲೂಕಿನ ಚವನಬಾವಿಯಲ್ಲಿ ಮನೆ ಕುಸಿದು ಬಿದ್ದಿದ್ದ ಗೋಡೆಯ ಅವಶೇಷಗಳ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದ ವೃದ್ಧ ದಂಪತಿಯನ್ನ ಗ್ರಾಮಸ್ಥರು ರಕ್ಷಿಸಿದ ಘಟನೆ ನಡೆದಿದೆ.
ಚವನಬಾವಿ ಗ್ರಾಮದ ಗದ್ದೆಪ್ಪ ಸಿದ್ದಪ್ಪ ವಾಲೀಕಾರ್, ಬಣ್ಣೆಮ್ಮ ವಾಲೀಕಾರ್ ದಂಪತಿ ಬೆಳಗಿನ ಜಾವ ಮನೆ ಕುಸಿದಿದ್ದರಿಂದ ಅವಶೇಷಗಳ ಅಡಿ ಸಿಲುಕಿದ್ದರು. ಅದರಲ್ಲಿ ಗದ್ದೆಪ್ಪನ ಕೈಗೆ ಪೆಟ್ಟಾಗಿದೆ. ಬಣ್ಣೆಮ್ಮಳಿಗೂ ಗಾಯಗಳಾಗಿವೆ. ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಬೃಹತ್ ಮರವೊಂದು ರಸ್ತೆಯ ಮೇಲೆಯೇ ಉರುಳಿದಿದೆ. ನಾಲತವಾಡ ಪಟ್ಟಣದಿಂದ ಮುದ್ದೇಬಿಹಾಳ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಬೃಹತ್ ಬೇವಿನ ಮರವೊಂದು ಧರೆಗುರುಳಿತು.