ಮುದ್ದೇಬಿಹಾಳ: ತಾಳಿಕೋಟಿ, ಮುದ್ದೇಬಿಹಾಳ ಹಾಗೂ ಢವಳಗಿ ಭಾಗದಲ್ಲಿ ಗುರುವಾರ ತಡ ರಾತ್ರಿ ಉತ್ತಮ ಮಳೆ ಸುರಿದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಮುದ್ದೇಬಿಹಾಳ ತಾಲೂಕಿನಲ್ಲಿ ಉತ್ತಮ ಮಳೆ: ರೈತರ ಮೊಗದಲ್ಲಿ ಮೂಡಿತು ಮಂದಹಾಸ - Muddebihal rain news
ಮುದ್ದೇಬಿಹಾಳ ತಾಲೂಕಿನಲ್ಲಿ ಗುರುವಾರ ತಡರಾತ್ರಿ ಉತ್ತಮ ಮಳೆ ಸುರಿದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
Rain
ಕೊರೊನಾದಿಂದಾಗಿ ಕೆಲ ರೈತರು ಸಂಕಷ್ಟ ಎದುರಿಸುತ್ತಿದ್ದು, ಉತ್ತಮ ಮಳೆ ಇಲ್ಲ ಎಂದು ಕಂಗಾಲಾಗಿದ್ದರು. ಆದರೆ ನಿನ್ನೆ ರಾತ್ರಿ ಉತ್ತಮ ಮಳೆಯಾಗಿದೆ. ಮುದ್ದೇಬಿಹಾಳ ತಾಲೂಕಿನಲ್ಲಿ 31.5 ಮೀ.ಮೀ, ಮತ್ತು ನಾಲತವಾಡ 18.1 ಮಿ.ಮೀ, ತಾಳಿಕೋಟಿ 46.2 ಮೀ.ಮಿ, ಢವಳಗಿ 43.2 ಮಿ.ಮೀ ಮಳೆಯಾಗಿದೆ.
ಮುಂಗಾರು ಹಂಗಾಮಿನಲ್ಲಿ ಬೀಜಗಳನ್ನು ಬಿತ್ತನೆ ಮಾಡಿದ್ದ ರೈತರಿಗೆ ನಿನ್ನೆ ಸುರಿದ ಮಳೆ ಒಳ್ಳೆ ಹದ ನೀಡಿದ್ದು, ಮಳೆಯಿಂದಾಗಿ ಅನ್ನದಾತರು ಸಂತಸ ವ್ಯಕ್ತಪಡಿಸಿದ್ದಾರೆ.