ವಿಜಯಪುರ : ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಹಾಮಳೆಯಿಂದ ಕೊಯ್ನಾ ಜಲಾಶಯದಿಂದ ಇಂದು ರಾತ್ರಿ 5 ಲಕ್ಷ ಕ್ಯೂಸೆಕ್ ನೀರು ಆಲಮಟ್ಟಿ ಜಲಾಶಯಕ್ಕೆ ನೀರು ಹರಿಸಲಾಗುತ್ತಿದೆ.
ಕೊಯ್ನಾ ಜಲಾಶಯದಿಂದ ಆಲಮಟ್ಟಿ ಜಲಾಶಯಕ್ಕೆ ನೀರು ಮಹಾರಾಷ್ಟ್ರದ ಅಧಿಕಾರಿಗಳ ಮಾಹಿತಿಯಂತೆ 3ಲಕ್ಷ ಕ್ಯೂಸೆಕ್ ನೀರು ಬಿಡಬಹುದು ಎನ್ನಲಾಗಿದೆ. ಆ ನೀರು ಆಲಮಟ್ಟಿ ಜಲಾಶಯ ತಲುಪಲು ಇನ್ನೂ ಎರಡು ದಿನ ಬೇಕಾಗುತ್ತದೆ ಎಂದು ಕೆಬಿಜೆಎನ್ ಎಲ್ ಎಂಡಿ ಡಾ. ಜೆ. ರವಿಶಂಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಕೊಯ್ನಾದಿಂದ 70 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಪ್ರತಿ ಗಂಟೆ ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೇನೆ. ಸದ್ಯ ಹೊರಹರಿವು 3.50ಲಕ್ಷ ಕ್ಯೂಸೆಕ್ ಇದೆ. ಒಳ ಹರಿವು ಸಹ 3.55ಲಕ್ಷ ಕ್ಯೂಸೆಕ್ ಇದೆ ಎಂದರು.