ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರ ಬಿರುಸಿನ ಮಳೆ: ಭೀಮಾನದಿ ತೀರದಲ್ಲಿ ಪ್ರವಾಹ ಭೀತಿ - ಭೀಮಾನದಿಯಲ್ಲಿ ಹೆಚ್ಚಿದ ನೀರು

ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು ಭೀಮಾ ನದಿ ತೀರದ ಜನರಲ್ಲಿ ಆತಂಕ ಹೆಚ್ಚಾಗಿದೆ. ಮಹಾರಾಷ್ಟ್ರ ಕರ್ನಾಟಕ ನಡುವಿನ ಕೆಲವು ರಸ್ತೆಗಳು ಸಂಪರ್ಕ ಕಳೆದುಕೊಂಡಿವೆ. ಜಿಲ್ಲಾಧಿಕಾರಿ ಭೀಮಾತೀರದ ಬ್ಯಾರೇಜ್ ಹಾಗೂ ಕೆಲ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

heavy-rain-in-maharashtra-flood-in-bhima-river-banks
ಮಹಾರಾಷ್ಟ್ರ ಬಿರುಸಿನ ಮಳೆ

By

Published : Sep 17, 2022, 6:04 PM IST

ವಿಜಯಪುರ : ನೆರೆಯ ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಗಡಿ ಭಾಗವಾಗಿರುವ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಜಿಲ್ಲೆಯ ಭೀಮಾನದಿಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗುತ್ತಿದೆ. ಚಡಚಣ ಇಂಡಿ ಹಾಗೂ ಆಲಮೇಲ ತಾಲೂಕುಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ.

2020 ರಲ್ಲಿ ಭೀಮಾನದಿಯಲ್ಲಿ ಭೀಕರ ಪ್ರವಾಹ ಉಂಟಾಗಿತ್ತು ಈಗ ಮಹಾರಾಷ್ಟ್ರದ ಉಜನಿ ಹಾಗೂ ವೀರ್ ಜಲಾಶಯಗಳಿಂದ ನೀರು ಬಿಟ್ಟ ಕಾರಣ ಭೀಮಾನದಿಯಲ್ಲಿ ಹೆಚ್ಚಿದ ನೀರು ಹೆಚ್ಚಾಗಿದೆ. ಉಜನಿ ಹಾಗೂ ವೀರ್ ಜಲಾಶಯದ ಮೂಲಕ 1,25,000 ಕ್ಯೂಸೆಕ್ ನೀರು ಬಿಡಲಾಗಿದೆ. ಭೀಮಾನದಿಯಲ್ಲಿನ ಏಳು ಬ್ಯಾರೇಜುಗಳು ಜಲಾವೃತವಾಗಿದ್ದು, ಮಹಾರಾಷ್ಟ್ರ ಹಾಗೂ ಕರ್ನಾಟಕದ ಸಮಾನಾಂತರದ ಬ್ಯಾರೇಜ್ ಕಂ ಬ್ರಿಡ್ಜ್​ಗಳು ಮುಳುಗಡೆಯಾಗಿವೆ.

ಬಾಂದಾರ್​ಗಳ ಮೇಲಿನ ಮಹಾರಾಷ್ಟ್ರ ಹಾಗೂ ಕರ್ನಾಟಕ ಸಂಪರ್ಕ ಬಂದ್ ಮಾಡಲಾಗಿದೆ. ಗೋವಿಂದಪುರ್ - ಬಂಡಾರಕವಟೆ, ಉಮರಾಣಿ- ಲವಂಗಿ, ಔಜ್‌‌ - ಶಿರನಾಳ, ಹಿಂಗಣಿ - ಆಳಗಿ, ಖಾನಾಪೂರ - ಪಡನೂರ, ಹಿಳ್ಳಿ - ಗುಬ್ಬೇವಾಡ, ಚಣೇಗಾಂವ್ - ಬರೂರು ಬಾಂದಾರ್​ಗಳು ಮುಳುಗಡೆಯಾಗಿವೆ.

ಮಹಾರಾಷ್ಟ್ರದಿಂದ ಇನ್ನು ಹೆಚ್ಚಿನ ನೀರು ಬಿಡುವ ಸಾಧ್ಯತೆ ಇರುವ ಕಾರಣ ಪ್ರವಾಹ ಭೀತಿ ಎದುರಾಗಿದೆ. ಹೆಚ್ಚು ನೀರು ಬಂದರೆ ಜಮೀನುಗಳಿಗೆ ಹಾಗೂ ಗ್ರಾಮಗಳಿಗೆ ಭೀಮಾ ನದಿ ನೀರು ನುಗ್ಗುವ ಆತಂಕದಲ್ಲಿ ಜನರಿದ್ದಾರೆ.

ಜಿಲ್ಲಾಧಿಕಾರಿ ಭೇಟಿ: ಭೀಮಾತೀರದ ಬ್ಯಾರೇಜ್ ಹಾಗೂ ಕೆಲ ಗ್ರಾಮಗಳಿಗೆ ಜಿಲ್ಲಾಧಿಕಾರಿ ಡಿಸಿ ಡಾ ವಿಜಯಮಹಾಂತೇಶ ದಾನಮ್ಮನವರ ಹಾಗೂ ಆಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನದಿ ತೀರದ ಗ್ರಾಮಗಳ ಜನರು ಸುರಕ್ಷತಾ ಕ್ರಮ ತೆಗದು ಕೊಳ್ಳುವಂತೆ ಮನವಿ ಮಾಡಿದ ಡಿಸಿ, ಜನ ಜಾನುವಾರುಗಳು ನದಿಯಲ್ಲಿ ಇಳಿಯಬಾರದೆಂದು ಸೂಚನೆ ನೀಡಲಾಗಿದೆ ಎಂದರು.

ಇದನ್ನೂ ಓದಿ :ರಾಜ್ಯದಲ್ಲಿ ಇನ್ನೆರಡು ದಿನ ಮಳೆ: ಕರಾವಳಿಯಲ್ಲಿ ಯೆಲ್ಲೋ ಅಲರ್ಟ್

ABOUT THE AUTHOR

...view details