ವಿಜಯಪುರ: ಕಳೆದ ಮೂರು ದಿನಗಳಿಂದ ಸಂಜೆಯಾಗುತ್ತಿದಂತೆ ಗುಮ್ಮಟನಗರಿಯಲ್ಲಿ ಅಕಾಲಿಕ ಮಳೆ ಸುರಿಯುತ್ತಿದೆ.
ಕಳೆದ ಮೂರು ದಿನಗಳಿಂದ ವಿಜಯಪುರದಲ್ಲಿ ಅಕಾಲಿಕ ಮಳೆ - ವಿಜಯಪುರ ಮಳೆ
ವಿಜಯಪುರದಲ್ಲಿ ಗುಡುಗು ಸಹಿತ ಅಕಾಲಿಕ ಮಳೆಯಾಗಿದ್ದು, ಜನತೆಯಲ್ಲಿ ಮಂದಹಾಸ ಮೂಡಿಸಿದೆ.
![ಕಳೆದ ಮೂರು ದಿನಗಳಿಂದ ವಿಜಯಪುರದಲ್ಲಿ ಅಕಾಲಿಕ ಮಳೆ vijapura](https://etvbharatimages.akamaized.net/etvbharat/prod-images/768-512-7219301-173-7219301-1589619133357.jpg)
ಅಕಾಲಿಕ ಮಳೆ
ವಿಜಯಪುರದಲ್ಲಿ ಗುಡುಗು ಸಹಿತ ಅಕಾಲಿಕ ಮಳೆ
ಶುಕ್ರವಾರ ರಾತ್ರಿ ಗುಡುಗು ಸಹಿತ ಅಕಾಲಿಕ ಮಳೆಯಾಗಿದ್ದು, ಬಿಸಿಲುನಾಡಿನ ಜನತೆಯಲ್ಲಿ ಮಂದಹಾಸ ಮೂಡಿಸಿದೆ. ಇನ್ನು ಗುಡುಗು ಸಹಿತ ಮಳೆ ಇದ್ದ ಕಾರಣ ನಗರದಲ್ಲಿ ಅರ್ಧ ಗಂಟೆಗೂ ಅಧಿಕ ಕಾಲ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು. ಕೇಂದ್ರ ಬಸ್ ನಿಲ್ದಾಣ, ಸ್ಟೇಷನ್ ರಸ್ತೆ, ಗೋಪಾರಪುರ ಬಡಾವಾಣೆ, ಗಣೇಶ ನಗರ ಸೇರಿದಂತೆ ನಗರದ ಬಹುತೇಕ ಭಾಗಗಳಲ್ಲಿ ಉತ್ತಮವಾಗಿ ಮಳೆ ಸುರಿದಿದೆ.
ಇನ್ನು ನಗರದ ಜನತೆಯಲ್ಲಿ ಮಳೆಯಾಗುತ್ತಿರುವ ಸಂತಸ ಒಂದೆಡೆಯಾದರೆ ಇತ್ತ ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.