ವಿಜಯಪುರ :ಪೂರ್ಣ ಪ್ರಮಾಣದ ನೆರೆ ಹಾವಳಿ ಸಮೀಕ್ಷೆ ನಂತರ ಮುಖ್ಯಮಂತ್ರಿಗಳ ಬೇಡಿಕೆಗೆ ಅನುಗುಣವಾಗಿ ಪ್ರಧಾನ ಮಂತ್ರಿಯವರು ನೆರೆ ಪರಿಹಾರ ಧನ ಬಿಡುಗಡೆ ಮಾಡುತ್ತಾರೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲವೊಂದು ಜಿಲ್ಲೆಯಲ್ಲಿ ಸಮೀಕ್ಷೆ ಮಾಡಲಾಗಿದೆ. ಕೇಂದ್ರ ಹಣಕಾಸು ಸಚಿವರೂ ಕೂಡ ಸಮೀಕ್ಷೆಯನ್ನು ಮಾಡಿದ್ದಾರೆ, ಪೂರ್ಣ ಪ್ರಮಾಣದ ವರದಿಯ ನಂತರ ಪ್ರಧಾನಮಂತ್ರಿ ಮೋದಿಯವರು ನಮ್ಮ ಬೇಡಿಕೆಯಂತೆ ನೆರೆ ಪರಿಹಾರ ನಿಧಿ ಬಿಡುಗಡೆ ಮಾಡುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆರೋಗ್ಯ ಸಚಿವ ಬಿ. ಶ್ರೀರಾಮುಲು ಕೆಲವರಿಗೆ ಸಚಿವ ಸ್ಥಾನ ತಪ್ಪಿದ ಕುರಿತು ಮಾತನಾಡಿದ ಅವರು, ಪಕ್ಷಕ್ಕೆ ಯಾರ ಅನಿವಾರ್ಯತೆ ಕೂಡಾ ಇಲ್ಲ, ಕೆಲವೊಮ್ಮೆ ಪಕ್ಷ ತೀರ್ಮಾನ ತೆಗೆದುಕೊಂಡರೆ ಅದನ್ನು ನಾವು ಬೆಂಬಲಿಸಲೇಬೇಕು ಎಂದರು.
ಮಧ್ಯಂತರ ಚುನಾವಣೆ ಕುರಿತು ಸಿದ್ದರಾಮಯ್ಯ ನೀಡಿದ ಹೇಳಿಕೆ ತಿರುಗೇಟು ನೀಡಿದ ಶ್ರೀರಾಮುಲು, ಸಿದ್ದರಾಮಯ್ಯಗೆ ಚಾಮುಂಡಿ ಕ್ಷೇತ್ರ ಸೋತ ಬಳಿಕ ವೈಮನಸ್ಸು ಪ್ರಾರಂಭವಾಗಿದೆ. ಅವರಿಗ ವಿರೋಧ ಪಕ್ಷದ ನಾಯಕರೂ ಆಗಕ್ಕೆ ಆಗಲ್ಲ, ಇಂತ ಪರಿಸ್ಥಿತಿಯಲ್ಲಿ ಅವರಿದ್ದಾರೆ, ಅವರ ಪಕ್ಷದಲ್ಲೇ ಬೇರೆ ನಾಯಕರು ಹುಟ್ಟಿಕೊಳ್ಳುತ್ತಿದ್ದಾರೆ.ನಾನು ಸಿಎಂ ಎನ್ನುವ ಮನೋಭಾವ ಬಿಟ್ಟು ಹೊರ ಬರಬೇಕು ಎಂದರು.
ಸಂತ್ರಸ್ಥರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸುತ್ತಿರುವ ಕುರಿತು ಮಾತನಾಡಿದ ಅವರು, ಲಕ್ಷ್ಮೀ ಹೆಬ್ಬಾಳಕರ್ ಒಂದು ತರ ಪ್ರಚಾರ ಪ್ರಿಯರು. ಹೀಗಾಗಿ ಅವರು ಏನೇನೋ ಹೇಳಿಕೆ ಕೊಡುತ್ತಾರೆ. ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಸಂಸ್ಕಾರವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.