ವಿಜಯಪುರ :ಧ್ವನಿ ಇಲ್ಲದ ಸಮಾಜಗಳಿಗೆ ಮೀಸಲಾತಿ ಬಗ್ಗೆ ಧ್ವನಿ ಎತ್ತುವುದು ಬ್ಲ್ಯಾಕ್ಮೇಲ್ ಆಗುವುದಿಲ್ಲ. ಆದರೆ, ಯಾರ‍್ಯಾರದ್ದೋ ಸಿಡಿ ಇಟ್ಟುಕೊಂಡು, ವೀಕ್ನೆಸ್ ಇಟ್ಟುಕೊಂಡು, ನನಗೆ ಮಂತ್ರಿ ಮಾಡುವುದಿಲ್ಲ ಎಂದರೆ ಸಿಡಿ ಹೊರಗಡೆ ಬಿಡುತ್ತೀನಿ ಎಂಬುವುದು ಬ್ಲ್ಯಾಕ್ಮೇಲ್ ಆಗುತ್ತದೆ.
ನಮ್ಮ ಬಿಜೆಪಿಯೊಳಗೆ ಯಾರ‍್ಯಾರದ್ದೋ ಸಿಡಿ ಇಟ್ಟುಕೊಂಡೇ ಮಂತ್ರಿ ಆಗಿದ್ದಾರೆ ಎಂದು ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ವಿಜಯಪುರ ತಾಲೂಕಿನ ಹಿಟ್ನಳ್ಳಿಯಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಕಂಚಿನ ಪುತ್ಥಳಿ ಅನಾವರಣಗೊಳಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಒಬ್ಬ ಇದ್ದಾನೆ, ಅವ ಅರ್ಹತೆ ಮೇಲೆ ಮಂತ್ರಿ ಆಗಿಲ್ಲ. 2ಎ ಮೀಸಲಾತಿ ಕೇಳುವುದು, ಕುರುಬ, ಹಡಪದ ಸೇರಿ ಧ್ವನಿ ಇಲ್ಲದ ಸಮಾಜಗಳಿಗೆ ಮೀಸಲಾತಿ ಕೊಡಿ ಎಂಬುವುದು ಬ್ಲ್ಯಾಕ್ಮೇಲ್ ಆಗಲ್ಲ ಎಂದು ಪರೋಕ್ಷವಾಗಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು.
50-100 ಕೋಟಿ ಎಲ್ಲಿಂದ ಕೊಡೋದು? :ನಾನು ಯಾರಿಗೂ ರೊಕ್ಕಾ ಕೊಡುವ ಮಗನಲ್ಲ. 50 ಕೋಟಿ ರೂ., 100 ಕೋಟಿ ರೂ. ಎಲ್ಲಿಂದ ಕೊಡುವುದು?. ಇಷ್ಟೊಂದು ಹಣ ಎಲ್ಲಿಂದ ಕೊಡುವುದಕ್ಕೆ ಆಗುತ್ತೆ?. ಎಷ್ಟು ಲೂಟಿ ಮಾಡೋದು?. 50 ಕೋಟಿ ರೂ. ಕೊಟ್ಟು ಸುಮ್ಮನೆ ಮನೆಯೊಳಗೆ ಇರಬಹುದು. ತಮ್ಮ ಸಿದ್ಧಸಿರಿ ಬ್ಯಾಂಕ್ನಲ್ಲೇ 50 ಕೋಟಿ ರೂ. ಡಿಪಾಸಿಟ್ ಇಟ್ಟರೆ. ಎಷ್ಟು ಆಗುತ್ತೆ ಬಡ್ಡಿ ಗೊತ್ತಿದೆ ಏನು ಎಂದರು.