ಕರ್ನಾಟಕ

karnataka

ETV Bharat / state

ಗಂಡನ ಮನೆಯವರಿಂದ ಕಿರುಕುಳ ಆರೋಪ.. ನವವಿವಾಹಿತೆ ಬಾವಿಗೆ ಹಾರಿ ಆತ್ಮಹತ್ಯೆ.. - A young lady suicide

ವಿಷಯ ತಿಳಿದ ಪೋಷಕರು ಮತ್ತು ಗ್ರಾಮಸ್ಥರು ಯುವತಿಗಾಗಿ ಹುಡುಕಾಡಿದ್ದಾರೆ. ಆದರೆ, ಯುವತಿ ಪತ್ತೆಯಾಗಿರಲಿಲ್ಲ. ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿಯನ್ನೂ ಕರೆಸಿ ಹುಡುಕಾಡಿದರೂ ಯುವತಿ ಪತ್ತೆಯಾಗಿರಲಿಲ್ಲ. ಬಳಿಕ ಮಂಗಳವಾರ ಬೆಳಗ್ಗೆ ಯುವತಿಯ ಮೃತದೇಹ ಪತ್ತೆಯಾಗಿದೆ..

young lady suicide
ನವವಿವಾಹಿತೆ ಬಾವಿಗೆ ಹಾರಿ ಆತ್ಮಹತ್ಯೆ

By

Published : Nov 16, 2021, 4:08 PM IST

ಮುದ್ದೇಬಿಹಾಳ :ಕೇವಲ 5 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವಿವಾಹಿತೆಯೊಬ್ಬಳು ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅರಸನಾಳ ಗ್ರಾಮದಲ್ಲಿ ನಡೆದಿದೆ.

ಅರಸನಾಳ ಗ್ರಾಮದ ಲಕ್ಷ್ಮಿ ಶಿವಪುತ್ರಪ್ಪ ಬೆಳ್ಳಿಕಟ್ಟಿ(20) ಮೃತ ಯುವತಿ. ಈಕೆಯನ್ನು ಬಾಗಲಕೋಟೆ ಜಿಲ್ಲೆಯ ರಾಂಪೂರದ ಶೇಕಪ್ಪ ಕಾಖಂಡಕಿ ಎಂಬಾತನೊ‍ಂದಿಗೆ ಕಳೆದ 5 ತಿಂಗಳ ಹಿಂದಷ್ಟೇ ಮದುವೆ ಮಾಡಿಕೊಡಲಾಗಿತ್ತು ಎನ್ನಲಾಗಿದೆ.

3 ತಿಂಗಳ ಹಿಂದೆ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಯುವತಿ ಲಕ್ಷ್ಮಿ ತವರು ಮನೆಗೆ ಬಂದಿದ್ದಳು. 2 ತಿಂಗಳು ಕಳೆದ ಬಳಿಕ ಪೋಷಕರು ಮಗಳನ್ನು ಮತ್ತೆ ಗಂಡನ ಮನೆಗೆ ಕಳುಹಿಸಲು ಮುಂದಾಗಿದ್ದಾರೆ. ಗಂಡನ ಮನೆಗೆ ಹೋಗಲು ಒಪ್ಪದ ಯುವತಿ ಸೋಮವಾರ ಸಂಜೆ ಊರಿನ ತೆರೆದ ಬಾವಿಗೆ ಹಾರಿದ್ದಾಳೆ.

ವಿಷಯ ತಿಳಿದ ಪೋಷಕರು ಮತ್ತು ಗ್ರಾಮಸ್ಥರು ಯುವತಿಗಾಗಿ ಹುಡುಕಾಡಿದ್ದಾರೆ. ಆದರೆ, ಯುವತಿ ಪತ್ತೆಯಾಗಿರಲಿಲ್ಲ. ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿಯನ್ನೂ ಕರೆಸಿ ಹುಡುಕಾಡಿದರೂ ಯುವತಿ ಪತ್ತೆಯಾಗಿರಲಿಲ್ಲ. ಬಳಿಕ ಮಂಗಳವಾರ ಬೆಳಗ್ಗೆ ಯುವತಿಯ ಮೃತದೇಹ ಪತ್ತೆಯಾಗಿದೆ.

ಶವವನ್ನು ಮರಣೋತ್ತರ ಪರೀಕ್ಷೆಗೆ ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಮುದ್ದೇಬಿಹಾಳ ಸಿಪಿಐ ಆನಂದ್​ ವಾಘ್ಮೋಡೆ, ಪಿಎಸ್ಐ ರೇಣುಕಾ ಜಕನೂರ್​ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದಾರೆ. ಮುದ್ದೇಬಿಹಾಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details