ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಧಾರಾಕಾರ ಮಳೆ, ಹಗೆವು ಕುಸಿತ

ತಿಕೋಟಾದ ಖಾಸಗಿ ಶಾಲೆಯೊಂದರ ಆಟದ ಮೈದಾನದಲ್ಲಿ ಭೂಮಿಯೊಳಗೆ ನಿರ್ಮಿಸಿದ್ದ ಹಗೆವು ಪತ್ತೆಯಾಗಿದೆ. ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಆ ಹಗೆವು ಕುಸಿತಗೊಂಡಿತ್ತು.

hagevu collapsed due to rain
ಹಗೆವು

By

Published : Jun 4, 2021, 1:16 PM IST

ವಿಜಯಪುರ:ಕಳೆದ ರಾತ್ರಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಗೆವು ಪತ್ತೆಯಾಗಿದೆ. ಭಾರೀ ಮಳೆಗೆ ಆ ಹಗೆವು ಕುಸಿತಗೊಂಡಿತ್ತು.

ತಿಕೋಟಾದ ಖಾಸಗಿ ಶಾಲೆಯೊಂದರ ಆಟದ ಮೈದಾನದಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ ದಾರಿಹೋಕರು ನೋಡಿ ಜನ ಬೀಳಬಾರದು ಎಂದು ಸುತ್ತಲೂ ಕಲ್ಲುಗಳನ್ನು ಇಟ್ಟು ಎಚ್ಚರ ಮೂಡಿಸಿದ್ದಾರೆ.

ಧಾರಾಕಾರ ಮಳೆಗೆ ಹಗೆವು ಕುಸಿತ!

ಭೂಮಿಯೊಳಗಡೆ ನಿರ್ಮಿಸಿದ್ದ ಹಳೆಯ ಕಾಲದ ಕಲ್ಲಿನ ಗೋಡೆಯ ಕಟ್ಟಡ ಧಾರಾಕಾರ ಮಳೆಯಿಂದ ಕುಸಿದಿದೆ. ತಿಕೋಟಾ ವಾಡೆ ಪ್ರದೇಶದ ನಿವಾಸಿಗಳು ಘಟನೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿಂದೆ ಗ್ರಾಮದ ಜನ ಜೋಳ ಸಂಗ್ರಹಿಸಿಡಲು ಈ ಹಗೆವುಗಳನ್ನು ನಿರ್ಮಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ರಾಮನಗರ: ಮ್ಯಾನ್​ ಹೋಲ್​ನಲ್ಲಿ ಉಸಿರುಗಟ್ಟಿ ಮೂವರು ಕಾರ್ಮಿಕರ ದುರ್ಮರಣ

ABOUT THE AUTHOR

...view details