ಕರ್ನಾಟಕ

karnataka

ಅಂಬೇಡ್ಕರ್ ಭಾವಚಿತ್ರ ಇಡದೇ ಅಪಮಾನ : ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಅಮಾನತು

By

Published : Aug 22, 2022, 6:59 PM IST

ಮುಖ್ಯಗುರು ಸಿ.ಜಿ.ನಾಗರಾಳ ದಲಿತ ಸಮಾಜ ಹಾಗೂ ಅಂಬೇಡ್ಕರ್ ಅಭಿಮಾನಿಗಳ ಕ್ಷಮೆ ಕೇಳಿದ್ದರು. ಆದರೆ ಇದಕ್ಕೆ ಸೊಪ್ಪು ಹಾಕದೇ ದಲಿತಪರ ಸಂಘಟನೆ ಹೋರಾಟಗಾರರು ಮುಖ್ಯಶಿಕ್ಷಕರ ವಿರುದ್ಧ ಕ್ರಮ ಜರುಗಿಸುವವರೆಗೂ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದರು.

Gundkarjagi Govt School Headmaster suspended
ಗುಂಡಕರ್ಜಗಿ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಅಮಾನತು

ಮುದ್ದೇಬಿಹಾಳ(ವಿಜಯಪುರ) : ಸ್ವಾತಂತ್ರ್ಯ ದಿನಾಚರಣೆಯ ವೇಳೆ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಭಾವಚಿತ್ರ ಇಟ್ಟು ಪೂಜಿಸದೇ ಅಪಮಾನ ಮಾಡಿದ ಆರೋಪ ಎದುರಿಸುತ್ತಿದ್ದ ತಾಲೂಕಿನ ಗುಂಡಕರ್ಜಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಸಿ.ಜಿ.ನಾಗರಾಳ ಅವರನ್ನು ಅಮಾನತುಗೊಳಿಸಿ ಬಿಇಓ ಆದೇಶ ಹೊರಡಿಸಿದ್ದಾರೆ.

ಈ ಕುರಿತು ಹೊರಡಿಸಿದ ಆದೇಶದಲ್ಲಿ ಆಗಸ್ಟ್​ 15ರ ಸ್ವಾತಂತ್ರ್ಯ ದಿನಾಚರಣೆಯಂದು ಅಂಬೇಡ್ಕರ್ ಭಾವಚಿತ್ರ ಇಟ್ಟಿಲ್ಲವೇಕೆ ಎಂದು ಕೇಳಿದ ದಲಿತಪರ ಸಂಘಟನೆಯ ಕಾರ್ಯಕರ್ತರಿಗೆ ಬೇಜವಾಬ್ದಾರಿಯಿಂದ ಉತ್ತರ ಕೊಟ್ಟಿದ್ದಲ್ಲದೆ, ಸಂವಿಧಾನ ಶಿಲ್ಪಿಗೆ ಅಪಮಾನಿಸಿರುವ ಮುಖ್ಯಗುರುಗಳ ಮೇಲೆ ಕ್ರಮ ಜರುಗಿಸುವಂತೆ ದಲಿತಪರ ಸಂಘಟನೆಯ ಕಾರ್ಯಕರ್ತರು ಬಿಇಓ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು.

ಅಲ್ಲದೇ ತಹಶಿಲ್ದಾರ್ ಕಚೇರಿ ಎದುರಿಗೆ ಮಾಧ್ಯಮಗೋಷ್ಟಿ ನಡೆಸಿದ್ದ ದಲಿತ ಮುಖಂಡರು ಮುಖ್ಯಶಿಕ್ಷಕನ ವಿರುದ್ಧ ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಇಓ ಎಸ್.ಜೆ.ನಾಯಕ ಅವರು ಆ.20 ರಂದೇ ಮುಖ್ಯಗುರುಗಳ ಅಮಾನತು ಆದೇಶ ಹೊರಡಿಸಿದ್ದಾರೆ.

ಅಂಬೇಡ್ಕರ್ ಭಾವಚಿತ್ರ ಇಡದೇ ಇರುವ ಕುರಿತು ಗುಂಡಕರ್ಜಗಿ ಶಾಲೆ ಮುಖ್ಯಗುರು ಸಿ.ಜಿ. ನಾಗರಾಳ ಅವರು ದಲಿತ ಸಮಾಜದ ಹಾಗೂ ಅಂಬೇಡ್ಕರ್ ಅಭಿಮಾನಿಗಳ ಕ್ಷಮೆಯನ್ನು ಬಹಿರಂಗವಾಗಿ ಕೇಳಿದ್ದರು. ಆದರೆ ಇದಕ್ಕೆ ಸೊಪ್ಪು ಹಾಕದೇ ದಲಿತಪರ ಸಂಘಟನೆಯ ಹೋರಾಟಗಾರರು ಮುಖ್ಯಶಿಕ್ಷಕರ ವಿರುದ್ಧ ಕ್ರಮ ಜರುಗಿಸುವವರೆಗೂ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದರು. ಇದೀಗ ಅಮಾನತು ಆದೇಶ ಹೊರಬಿದ್ದಿದೆ.

ಇದನ್ನೂ ಓದಿ :ವಿವಾದ ಮಾಡುವುದರಲ್ಲಿ ಬಿಜೆಪಿಗರು ನಿಸ್ಸೀಮರು.. ಮಾಂಸ ವಿವಾದಕ್ಕೆ ಆರ್‌ ಧ್ರುವನಾರಾಯಣ ಕಿಡಿ

ABOUT THE AUTHOR

...view details