ಕರ್ನಾಟಕ

karnataka

By

Published : Apr 30, 2022, 9:14 PM IST

Updated : May 2, 2022, 8:02 PM IST

ETV Bharat / state

ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ನಾಲತವಾಡದ ಹುಡುಗಿಯ ಚಿನ್ನದ ಸಾಧನೆ

ಜಗದೀಶ ಇಲಕಲ್ ಹಾಗೂ ತಾಯಿ ನಾಗರತ್ನ ಅವರ ಪುತ್ರಿ ವಿದ್ಯಾಶ್ರೀ ಮೈಕ್ರೋಬಯೋಲೋಜಿ ವಿಷಯದಲ್ಲಿ ಪ್ರಥಮ ರ‍್ಯಾಂಕ್ ಪಡೆದು ಗುಲಬರ್ಗಾ ಯುನಿವರ್ಸಿಟಿಯ 7 ಚಿನ್ನದ ಪದಕಗಳಿಗೆ ಭಾಜನರಾಗಿದ್ದಾರೆ.

Gulbarga University convocation: one student won 7 gold Medal
ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ನಾಲತವಾಡದ ಹುಡುಗಿಯ ಚಿನ್ನದ ಸಾಧನೆ

ಮುದ್ದೇಬಿಹಾಳ(ವಿಜಯಪುರ):ನಾಲತವಾಡ ಪಟ್ಟಣದ ನಿವಾಸಿ ಗುತ್ತಿಗೆದಾರರಾದ ಜಗದೀಶ ಇಲಕಲ್ ಹಾಗೂ ತಾಯಿ ನಾಗರತ್ನ ಅವರ ಪುತ್ರಿ ವಿದ್ಯಾಶ್ರೀ 7 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ಗುಲಬರ್ಗಾ ಯುನಿವರ್ಸಿಟಿಯ ಎಂಎಸ್ಸಿ ಅಂತಿಮ ವರ್ಷದ ಮೈಕ್ರೋಬಯೋಲೋಜಿ ವಿಷಯದಲ್ಲಿ ಪ್ರಥಮ ರ‍್ಯಾಂಕ್ ಪಡೆದು 7 ಚಿನ್ನದ ಪದಕಗಳನ್ನು ಗಿಟ್ಟಿಸಿಕೊಂಡವರು.

ಕಳೆದ 2 ವರ್ಷಗಳಿಂದಲೂ ಸತತ ಅಭ್ಯಸಿಸಿ ನಾಲ್ಕು ಸೆಮಿಸ್ಟರ್ ಪರೀಕ್ಷೆ ಮಗಿಸಿ ನಂತರ ಯುನಿವರ್ಸಿಟಿಯಲ್ಲಿ ನಡೆದ ಪ್ರತಿ ಪರೀಕ್ಷೆಯಲ್ಲೂ ರ‍್ಯಾಂಕ್ ಪಡೆದಿದ್ದಾರೆ. ಸತತ ಸಾಧನೆಯ ಹಾದಿ ಕಂಡುಕೊಂಡ ವಿದ್ಯಾಶ್ರೀ ಇತರೇ ವಿದ್ಯಾರ್ಥಿನಿಯರೂ ಸಹ ಸಾಧನೆ ಮಾಡಲಿ ಎಂದು ಹರಸಿದ್ದಾರೆ.

ಪದಕ ವಿತರಣೆ: ಏ.27 ರಂದು ಗುಲಬರ್ಗಾ ಯುನಿವರ್ಸಿಟಿಯಲ್ಲಿ ನಡೆದ 39 ಹಾಗೂ 40ನೇ ಘಟಿಕೋತ್ಸವದ ಸಮಾರಂಭದಲ್ಲಿ ರಾಜ್ಯಪಾಲರಾದ ತಾವರಚಂದ್ ಗೆಹ್ಲೋತ್ ಅವರು ಸಾಧಕಿ ವಿದ್ಯಾಶ್ರೀ ಯವರಿಗೆ ಒಟ್ಟು 7 ಚಿನ್ನದ ಪದಕಗಳನ್ನು ನೀಡಿ ಪ್ರೋತ್ಸಾಹಿಸಿದ್ದಾರೆ.

ಇದನ್ನೂ ಓದಿ:ಕಾಶ್ಮೀರಿ ಪಂಡಿತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಿದೆ ಪುತ್ತೂರಿನ ಅಂಬಿಕಾ ವಿದ್ಯಾಸಂಸ್ಥೆ

Last Updated : May 2, 2022, 8:02 PM IST

ABOUT THE AUTHOR

...view details