ವಿಜಯಪುರ:ಸುಪ್ರಸಿದ್ಧ ಅನ್ನದಾಸೋಹಿ ಗುಡ್ಡಾಪುರ ದಾನಮ್ಮಳ ಭಕ್ತರ ಪಾದಯಾತ್ರೆ ಹಾಗೂ ಜಾತ್ರೆ ಈ ವರ್ಷ ರದ್ದು ಮಾಡಲಾಗಿದೆ ಎಂದು ದೇವಸ್ಥಾನ ಮಂಡಳಿ ಪ್ರಕಟಣೆ ಮೂಲಕ ತಿಳಿಸಿದೆ.
ಅನ್ನದಾಸೋಹಿ ಗುಡ್ಡಾಪುರ ದಾನಮ್ಮದೇವಿ ಜಾತ್ರೆ ರದ್ದು: ಕಾರಣ? - ವಿಜಯಪುರ ಸುದ್ದಿ
ಡಿಸೆಂಬರ್ 13 ರಿಂದ 16ರವರೆಗೆ ನಡೆಯಬೇಕಿದ್ದ ಅನ್ನದಾಸೋಹಿ ಗುಡ್ಡಾಪುರ ದಾನಮ್ಮಳ ಭಕ್ತರ ಪಾದಯಾತ್ರೆ ಹಾಗೂ ಜಾತ್ರೆಯನ್ನು ಈ ವರ್ಷ ರದ್ದು ಮಾಡಲಾಗಿದೆ ಎಂದು ದೇವಸ್ಥಾನ ಮಂಡಳಿ ಪ್ರಕಟಣೆ ಮೂಲಕ ತಿಳಿಸಿದೆ.
ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿರುವ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಗುಡ್ಡಾಪುರ ದಾನಮ್ಮದೇವಿ ಜಾತ್ರೆಯನ್ನು ಈ ಬಾರಿ ರದ್ದು ಮಾಡಲಾಗಿದೆ. 12ನೇ ಶತಮಾನದಲ್ಲಿ ಬಸವಾದಿ ಶರಣರ ಸಮಕಾಲೀನರಾದ ಶರಣೆ ದಾನಮ್ಮದೇವಿಯ ಸುಕ್ಷೇತ್ರ ಗುಡ್ಡಾಪುರದಲ್ಲಿ ಪ್ರತಿ ವರ್ಷ ಚಟ್ಟಿ ಅಮಾವಾಸ್ಯೆಗೆ ದೊಡ್ಡ ಜಾತ್ರೆ ನಡೆಯುತ್ತದೆ. ಅಂತಾರಾಜ್ಯ ಮಟ್ಟದಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿರುವ ಶರಣೆ ಗುಡ್ಡಾಪುರ ದಾನಮ್ಮ ದೇವಿ ಜಾತ್ರೆಗೆ ಪಾದಯಾತ್ರೆ ಮೂಲಕ ಭಕ್ತರು ಬರುತ್ತಾರೆ.
ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಜಾತ್ರೆ ರದ್ದು ಮಾಡಲಾಗಿದೆ. ಡಿಸೆಂಬರ್ 13 ರಿಂದ 16ರವರೆಗೆ ನಡೆಯಬೇಕಿದ್ದ ಗುಡ್ಡಾಪುರ ದಾನಮ್ಮದೇವಿ ಜಾತ್ರೆಯನ್ನು ರದ್ದು ಮಾಡಲಾಗಿದೆ ಎಂದು ಶ್ರೀದಾನಮ್ಮ ದೇವಿ ದೇವಸ್ಥಾನ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.