ವಿಜಯಪುರ: ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ 4 ತಾಲೂಕುಗಳಲ್ಲಿ ಚುನಾವಣೆ ನಡೆಯಲಿದ್ದು, 88 ಗ್ರಾಮ ಪಂಚಾಯಿತಿಗಳಿಗೆ ಮತದಾನ ನಡೆಯಲಿದೆ. ಇದಕ್ಕೆ ಜಿಲ್ಲಾಡಳಿತದಿಂದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ತಿಳಿಸಿದ್ದಾರೆ.
ಎರಡನೇ ಹಂತದ ಚುನಾವಣೆಗೆ 5,45,6555 ಮತದಾರರಿದ್ದು, ಒಟ್ಟು 744 ಮತಗಟ್ಟೆಗಳಿವೆ. 113 ಸೂಕ್ಷ್ಮ ಮತಗಟ್ಟೆಗಳಿವೆ. 89 ಅತಿಸೂಕ್ಷ್ಮ ಮತಗಟ್ಟೆಗಳು, 582 ಸಾಧಾರಣ ಮತಗಟ್ಟೆಗಳಿವೆ. ಚುನಾವಣೆ ಕಾರ್ಯಕ್ಕೆ 99 ಚುನಾವಣೆ ಅಧಿಕಾರಿಗಳು, 108 ಸಹಾಯಕ ಚುನಾವಣಾ ಅಧಿಕಾರಿಗಳು, 43 ಸೆಕ್ಟರ್ ಅಧಿಕಾರಿಗಳು, 4 ಎಂಸಿಸಿ ಟೀಮ್ ನಿಯೋಜಿಸಲಾಗಿದೆ. 876 ಪೋಲಿಂಗ್ ಪಾರ್ಟಿಗಳಿದ್ದು, 572 ಚುನಾವಣೆ ನಡೆಯುವ ಕ್ಷೇತ್ರಗಳಾಗಿವೆ. 1628 ಚುನಾವಣೆ ನಡೆಯುವ ಒಟ್ಟು ಸ್ಥಾನಗಳಾಗಿದ್ದು, 146 ವಾಹನಗಳು, 108 ಬಸ್, 14 ಮಿನಿ ಬಸ್, 26 ಕ್ರೂಸರ್, 8 ಜೀಪ್, 10 ಕಾಯ್ದಿರಿಸಿದ ಜೀಪ್‌ಗಳಿವೆ ಎಂದು ಅವರು ತಿಳಿಸಿದ್ದಾರೆ.