ವಿಜಯಪುರ: ಜಿಲ್ಲೆಯಲ್ಲಿ ನಡೆಯುತ್ತಿರುವ ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಗೆ ಅಂತಿಮವಾಗಿ ಒಟ್ಟು 4,250 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ತಿಳಿಸಿದ್ದಾರೆ.
2ನೇ ಹಂತದ ಗ್ರಾ.ಪಂ ಚುನಾವಣೆ: ಅಂತಿಮ ಕಣದಲ್ಲಿ 4,250 ಅಭ್ಯರ್ಥಿಗಳು
ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಗೆ ವಿಜಯಪುರದಲ್ಲಿ ಅಂತಿಮವಾಗಿ 4,250 ಅಭ್ಯರ್ಥಿಗಳು ಕಣದಲ್ಲಿದ್ದು, 119 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಡಿ.11 ರಿಂದ 16 ರವರೆಗೆ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 6,165 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ 119 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂಡಿ ತಾಲೂಕಿನ 38 ಗ್ರಾಮ ಪಂಚಾಯತಿಗಳ 671 ಸ್ಥಾನಗಳಿಗೆ ಒಟ್ಟು 1,716 ಮಂದಿ, ಚಡಚಣ ತಾಲೂಕಿನ ಒಟ್ಟು 13 ಗ್ರಾಮ ಪಂಚಾಯತಿಗಳ 271 ಸ್ಥಾನಗಳಿಗೆ 787 ಅಭ್ಯರ್ಥಿಗಳು, ಸಿಂದಗಿ ತಾಲೂಕಿನ 23 ಗ್ರಾಮ ಪಂಚಾಯತಿಗಳ 431 ಸ್ಥಾನಗಳಿಗೆ 1,070 ಮಂದಿ, ದೇವರ ಹಿಪ್ಪರಗಿ ತಾಲೂಕಿನ 14 ಗ್ರಾಮ ಪಂಚಾಯತಿಗಳ 255 ಸ್ಥಾನಗಳಿಗೆ 677 ಮಂದಿ ಸೇರಿ ಒಟ್ಟು 88 ಗ್ರಾಪಂಗಳ 1,628 ಸ್ಥಾನಕ್ಕೆ ಅಂತಿಮವಾಗಿ 4,250 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ ಎಂದು ಡಿಸಿ ತಿಳಿಸಿದ್ದಾರೆ.