ಕರ್ನಾಟಕ

karnataka

ETV Bharat / state

ಗ್ರಾಪಂ ಚುನಾವಣೆ: ವಿಜಯಪುರ ಜಿಲ್ಲೆಯಲ್ಲಿ 81 ನಾಮಪತ್ರಗಳು ತಿರಸ್ಕೃತ

ಗ್ರಾಮ ಪಂಚಾಯತ್​ ಚುನಾವಣೆ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಸುಮಾರು 7,533 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಅದರಲ್ಲಿ 81 ನಾಮಪತ್ರಗಳು ತಿರಸ್ಕೃತಗೊಂಡಿವೆ. ಈ ಕುರಿತಂತೆ ಜಿಲ್ಲಾಧಿಕಾರಿ ಪಿ.ಸುನೀಲ್​ ಕುಮಾರ್ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಪಿ.ಸುನೀಲ್​ ಕುಮಾರ್​
District Collector P. Sunil Kumar

By

Published : Dec 13, 2020, 4:30 PM IST

ವಿಜಯಪುರ: ಗ್ರಾಮ ಪಂಚಾಯತ್​ ಚುನಾವಣೆಗೆ ಮೊದಲ ಹಂತದಲ್ಲಿ 7,533 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದರು. ಇದರಲ್ಲಿ ಸುಮಾರು 81 ನಾಮಪತ್ರಗಳನ್ನು ತಿರಸ್ಕೃತಗೊಂಡಿವೆ. 7,232 ನಾಮಪತ್ರ ಸ್ವೀಕೃತಗೊಂಡಿವೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್​ ಕುಮಾರ್​ ತಿಳಿಸಿದ್ದಾರೆ.

ಜಿಲ್ಲೆಯ 12 ತಾಲೂಕಿನ ಸುಮಾರು 212 ಗ್ರಾಮ ಪಂಚಾಯತ್​ಗಳ ಪೈಕಿ 201 ಗ್ರಾಮ ಪಂಚಾಯತ್​ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಮೊದಲ ಹಂತದಲ್ಲಿ 8 ತಾಲೂಕುಗಳ 111 ಗ್ರಾ. ಪಂ.ಗಳ 2,126 ಸದಸ್ಯ ಸ್ಥಾನಕ್ಕೆ ಡಿ. 22 ರಂದು ಮತದಾನ ನಡೆಯಲಿದೆ ಅವರು ಮಾಹಿತಿ ನೀಡಿದರು.

ಓದಿ : ವಿಜಯಪುರದಲ್ಲಿ ನಗರ ಸಾರಿಗೆ ಬಸ್​ ಅಡ್ಡಗಟ್ಟಿ ಜಗಳಕ್ಕಿಳಿದ ಪಾನಮತ್ತ ಕಂಡಕ್ಟರ್

ಡಿ. 7ರಿಂದ 11ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇಲ್ಲಿಯವರೆಗೆ 7,533 ಅಭ್ಯರ್ಥಿಗಳು ವಿವಿಧ ಕ್ಷೇತ್ರಗಳಿಗೆ ನಾಮ ಪತ್ರ ಸಲ್ಲಿಸಿದ್ದಾರೆ. ಇದರಲ್ಲಿ 81 ನಾಮಪತ್ರಗಳು ತಿರಸ್ಕೃತಗೊಂಡಿದ್ದು, 7,232 ನಾಮಪತ್ರ ಸ್ವೀಕೃತಗೊಂಡಿವೆ. ವಿಜಯಪುರ ತಾಲೂಕು- 1,293, ತಿಕೋಟಾ- 926, ನಿಡಗುಂದಿ- 468, ಮುದ್ದೇಬಿಹಾಳ- 1,109, ತಾಳಿಕೋಟೆ- 1,002, ಬಬಲೇಶ್ವರ-1,001, ಬಾಗೇವಾಡಿ 987, ಕೊಲ್ಹಾರ 446 ಸೇರಿ ಒಟ್ಟು 7,233 ಅಭ್ಯರ್ಥಿಗಳ ನಾಮಪತ್ರಗಳು ಕ್ರಮ ಬದ್ಧವಾಗಿವೆ. ನಾಮಪತ್ರ ಹಿಂಪಡೆಯಲು ಡಿ.14 ಕೊನೆ ದಿನವಾಗಿದೆ. ಡಿ. 22ರಂದು ಮತದಾನ ನಡೆಯಲಿದೆ.

ABOUT THE AUTHOR

...view details