ಕರ್ನಾಟಕ

karnataka

ETV Bharat / state

ಸರ್ಕಾರವು ರಾಜ್ಯದ ಜನತೆಗೆ ಏರೋಪ್ಲೇನ್ ತೋರಿಸುತ್ತಿದೆ: ಮಧು ಬಂಗಾರಪ್ಪ ವ್ಯಂಗ್ಯ

ಸರ್ಕಾರ ಬಂದಿದ್ದು ಜನರ ಸಹಕಾರದಿಂದಲ್ಲ - ಸಹೋದರರ ಸವಾಲ್​ ಎಂದು ಸಿನಿಮಾ ತೆಗೆಯುತ್ತಿಲ್ಲ - ಕಾಂಗ್ರೆಸ್​ ಪಕ್ಷದ ವತಿಯಿಂದ ಜಿಲ್ಲಾವಾರು ಪ್ರಣಾಳಿಕೆ ಬಿಡುಗಡೆಗೆ ಚಿಂತನೆ - ವಿಜಯಪುರದಲ್ಲಿ ಮಧು ಬಂಗಾರಪ್ಪ ಹೇಳಿಕೆ

govt-showing-airplane-to-people-of-state-madhu-bangarappa
ಸರ್ಕಾರವು ರಾಜ್ಯದ ಜನತೆಗೆ ಏರೋಪ್ಲೇನ್ ತೋರಿಸುತ್ತಿದೆ: ಮಧು ಬಂಗಾರಪ್ಪ

By

Published : Jan 11, 2023, 3:38 PM IST

Updated : Jan 11, 2023, 6:08 PM IST

ಸರ್ಕಾರವು ರಾಜ್ಯದ ಜನತೆಗೆ ಏರೋಪ್ಲೇನ್ ತೋರಿಸುತ್ತಿದೆ: ಮಧು ಬಂಗಾರಪ್ಪ ವ್ಯಂಗ್ಯ

ವಿಜಯಪುರ: ರಾಜ್ಯ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ. ಸರ್ಕಾರವು ರಾಜ್ಯದ ಜನತೆಗೆ ಏರೋಪ್ಲೇನ್ ತೋರಿಸುತ್ತಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಅಲ್ಲ, ಇದು ಬಿಜಿನೆಸ್ ಜನತಾ ಪಾರ್ಟಿ ಆಗಿದೆ ಎಂದು ಲೇವಡಿ ಮಾಡಿದರು.

ಬಿಜೆಪಿಯವರು ರಸ್ತೆ, ಚರಂಡಿ ಸೇರಿದಂತೆ ವಿವಿಧ ಕೆಲಸದಲ್ಲಿ ಹಣ ಹೊಡೆಯುತ್ತಿದ್ದಾರೆ, ಬಿಜೆಪಿ ಪಕ್ಷ ದೇಶವನ್ನು ಆಳೋಕೆ ಬಂದಿಲ್ಲ, ಜಿಹಾದ್ ಹೆಸರಿನಲ್ಲಿ ಕಟೀಲ್ ರಾಜಕೀಯ ಮಾಡುತ್ತಿದ್ದಾರೆ. ಪಾರ್ಲಿಮೆಂಟ್​ನಲ್ಲಿ ಹೆಜ್ಜೆ ಇಡುವುದಕ್ಕೆ ಕಟೀಲ್‌ಗೆ ಯೋಗ್ಯತೆ ಇಲ್ಲ, ಅವರಿಗೆ ನಾಚಿಕೆ ಆಗಬೇಕು, ಮುಸ್ಲಿಮರನ್ನು ದೂರು ಇಡುವ ಕೆಲಸ ಆಗುತ್ತಿದೆ. ಈ ಸಲ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಬಿಜೆಪಿಯವರ ಹಿಂದುತ್ವದ ಅಜೆಂಡಾ ಸಂಪೂರ್ಣ ನೆಲ‌ ಕಚ್ಚಿದೆ ಎಂದು ವಾಗ್ದಾಳಿ ನಡೆಸಿದರು.

ನಾನು ಸಿನಿಮಾ ತೆಗೆಯುತ್ತಿಲ್ಲ:ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸೊರಬ ಕ್ಷೇತ್ರದಿಂದ ಕುಮಾರ ಬಂಗಾರಪ್ಪ ಎದುರು ಮಧು ಬಂಗಾರಪ್ಪ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಇದು ಮತ್ತೊಮ್ಮೆ ಸಹೋದರರ ಸವಾಲು ಎನ್ನಬಹುದೇ ಎನ್ನುವ ಪ್ರಶ್ನೆಗೆ ಗರಂ ಆದರು. ಸಹೋದರರ ಸವಾಲು ಎನ್ನಲು ನಾನು ಸಿನಿಮಾ ತೆಗೆಯುತ್ತಿಲ್ಲ, ನಮ್ಮ ಸಂಸಾರಿಕ ವಿಚಾರ ಬೇಡ, ತಂದೆ ಬಂಗಾರಪ್ಪ ಅವರು ನಮ್ಮ ಮನೆ ಪಂಚಾಯಿತಿಯನ್ನ ಈಗಾಗಲೇ ಮಾಡಿ ಮುಗಿಸಿದ್ದಾರೆ ಎಂದರು. ಪದೇ ಪದೆ ಅದೇ ಹೇಳುವುದು ಸರಿಯಲ್ಲ, ನಾನು‌ ಕಾಂಗ್ರೆಸ್ ಪಕ್ಷದಿಂದ ಅರ್ಜಿ ಹಾಕಿದ್ದೇನೆ, ಟಿಕೆಟ್ ಸಿಗುವ ವಿಶ್ವಾಸವಿದೆ, ಅದೇ ರೀತಿ ಕುಮಾರ್​ ಬಂಗಾರಪ್ಪ ಅವರ ಪಕ್ಷದ ಪರ ಇರುತ್ತಾರೆ, ಅವರವರ ವಿಷಯ ಬಿಟ್ಟು ಬಿಡಿ ಎಂದು ಆ ವಿಷಯದ ಬಗೆಗಿನ ಚರ್ಚೆಗೆ ತೆರೆ ಎಳೆದರು.

ಬಿಜೆಪಿಯವರದ್ದು ದ್ವೇಷ ರಾಜಕಾರಣ: ಹಿಂದೂ ಕಾರ್ಯಕರ್ತ ಪರೇಶ್​ ಮೆಸ್ತಾ ಹತ್ಯೆಯನ್ನು ಬಿಜೆಪಿ 2018ರ ಚುನಾವಣೆಯಲ್ಲಿ ಅಸ್ತ್ರವನ್ನಾಗಿ ಬಳಸಿಕೊಂಡಿತ್ತು. ಇದರ ಪರಿಣಾಮ ಮಂಗಳೂರು, ಶಿವಮೊಗ್ಗ, ಉಡುಪಿ, ಕಾರವಾರದಲ್ಲಿ ಕೋಮು ಗಲಭೆಗಳಾದವು. ಹಿಂದೂ - ಮುಸ್ಲಿಂ ನಡುವೆ ದ್ವೇಷ ಹುಟ್ಟುವಂತಾಯಿತು. ಅದನ್ನು ಯಾರು ಮಾಡಿದರು? ಈಗ ಮತ್ತೆ ಅದೇ ರೀತಿಯ ಕಾರಣ ಹುಡುಕುತ್ತಿದ್ದಾರೆ. ಆದರೆ, ಈ ಬಾರಿ ಜನರಿಗೆ ಗೊತ್ತಿದೆ ಭಾವನಾತ್ಮಕ ವಿಷಯದಿಂದ ಹೊಟ್ಟೆ ತುಂಬುವುದಿಲ್ಲ ಎಂದು ಹೇಳಿದರು.

ಅದೇ ರೀತಿ ಮತ್ತೊಂದು ಕಾರಣವನ್ನ ಮುಂದಿನ ಚುನಾವಣೆಗಾಗಿ ಹುಡುಕುತ್ತಿದ್ದಾರೆ. ಆದರೆ, ಬಿಜೆಪಿಯವರು ಏನೇ ಬಾಲ ಬಿಚ್ಚಿದರೂ ಇನ್ನೂ ಮುಂದೆ ಯಶಸ್ವಿಯಾಗುವದಿಲ್ಲ, ಇಂತಹ ಭಾವನಾತ್ಮಕ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿ ಚುನಾವಣೆ ಎದುರಿಸುವುದಾದರೆ ಕಾಂಗ್ರೆಸ್ ಸಹ ಇದಕ್ಕೆ ತಕ್ಕ‌ ಕೌಂಟರ್ ನೀಡುತ್ತಲೇ ಇದೆ. ಅಂದು ಹಿಂದೂ ಕಾರ್ಯಕರ್ತ ಪರೇಶ್ ಮೆಸ್ತಾ ಹತ್ಯೆಯನ್ನು ಸಿಬಿಐಗೆ ವಹಿಸಿದ್ದಾಗ, ಅದನ್ನು ಸಿದ್ದರಾಮಯ್ಯ ತಿದ್ದಿದ್ದಾರೆ ಎಂದು ಆರೋಪ ಮಾಡಿದರು.

ಸಾವಿನ ಮನೆಯಲ್ಲಿ ಕುಳಿತು ಅಧಿಕಾರ ನಡೆಸಿದ್ದಾರೆ: ಗುತ್ತಿಗೆದಾರ ಸಂತೋಷ ಪಾಟೀಲ್​ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಅವರಿಗೆ ಬಿ ರಿಪೋರ್ಟ್ ನೀಡಿತು. ದೊಡ್ಡ ಸಂಸ್ಥೆಯಾಗಿರುವ ಸಿಬಿಐ ನೀಡಿದ ವರದಿಯನ್ನು ಅನುಮಾನದಿಂದ ಬಿಜೆಪಿ ನೋಡಿತು.‌ ಈ ಸರ್ಕಾರ ಬಂದಿದ್ದು ಜನರ ಸಹಕಾರದಿಂದಲ್ಲ, ಸಾವಿನ ಮನೆಯಲ್ಲಿ ಕುಳಿತು ಅಧಿಕಾರ ನಡೆಸಿದ್ದಾರೆ. ಬಿಜೆಪಿ ಜನರ ವಿಶ್ವಾಸದಿಂದಲ್ಲ ಎಂದು ತೋರಿಸುತ್ತದೆ ಎಂದು ಟೀಕಾ ಪ್ರಹಾರ ನಡೆಸಿದರು.

ಜಿಲ್ಲಾವಾರು ಪ್ರಣಾಳಿಕೆ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪರವಾಗಿ ರಾಜ್ಯಕ್ಕೆ ಒಂದು ಪ್ರಣಾಳಿಕೆ ತಯಾರಿಸಲಾಗುತ್ತಿದೆ. ನಂತರ ಪ್ರತಿ ಜಿಲ್ಲಾವಾರು ಪ್ರತ್ಯೇಕ ಪ್ರಣಾಳಿಕೆಯನ್ನು ತಯಾರಿ ನಡೆಸಲಾಗುತ್ತಿದೆ. ಒಂದು ಜಿಲ್ಲೆಯಲ್ಲಿರುವ ಸಮಸ್ಯೆ ಬೇರೆ ಜಿಲ್ಲೆಯಲ್ಲಿ ಇಲ್ಲ, ಹೀಗಾಗಿ ಜಿಲ್ಲಾವಾರು ಪ್ರಣಾಳಿಕೆಗೆ ಆದ್ಯತೆ ನೀಡಲಾಗಿದೆ. ಆಯಾ ಸ್ಥಳೀಯ ಮುಖಂಡರ ನೇತ್ವತೃದಲ್ಲಿ ಚಿಂತನ ಮಂಥನ ನಡೆಸಿ ಪ್ರಣಾಳಿಕೆ ತಯಾರಿಸುವುದಾಗಿ ತಿಳಿಸಿದರು.

ಇದನ್ನೂ ಓದಿ:ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಪ್ರಾರ್ಥನೆ.. ಜಮಖಂಡಿಯಿಂದ ದೆಹಲಿವರೆಗೆ ಯುವಕರ ಪಾದಯಾತ್ರೆ

Last Updated : Jan 11, 2023, 6:08 PM IST

ABOUT THE AUTHOR

...view details