ಮುದ್ದೇಬಿಹಾಳ(ವಿಜಯಪುರ):ಹೂವು ಮಾರುವವರ ಪರಿಸ್ಥಿತಿ ಸುಧಾರಿಸಲು ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು ಎಂದು ಅಖಿಲ ಕರ್ನಾಟಕ ಹೂಗಾರ ಸಂಘದ ರಾಜ್ಯಾಧ್ಯಕ್ಷ ಅರವಿಂದ ಹೂಗಾರ ಸರ್ಕಾರವನ್ನ ಒತ್ತಾಯಿಸಿದ್ದಾರೆ.
ಸರ್ಕಾರ ಹೂ ಮಾರುವವರಿಗೆ ವಿಶೇಷ ಪ್ಯಾಕೇಜ್ ನೀಡಬೇಕು: ಅರವಿಂದ ಹೂಗಾರ ಒತ್ತಾಯ - vijyapura news
ರಾಜ್ಯ ಸರ್ಕಾರ ಹೂವು ಮಾರುವವರ ನೆರವಿಗೆ ಧಾವಿಸಿ, ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಅಖಿಲ ಕರ್ನಾಟಕ ಹೂಗಾರರ ಸಂಘದ ರಾಜ್ಯಾಧ್ಯಕ್ಷ ಅರವಿಂದ ಹೂಗಾರ ಒತ್ತಾಯಿಸಿದ್ದಾರೆ.
ಸರ್ಕಾರ ಹೂ ಮಾರುವವರಿಗೆ ವಿಶೇಷ ಪ್ಯಾಕೇಜ್ ನೀಡಬೇಕು: ಅರವಿಂದ ಹೂಗಾರ ಒತ್ತಾಯ
ಕೊರೊನಾ ಲಾಕ್ಡೌನ್ನಿಂದಾಗಿ ಹೂ ಮಾರುವವರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಏಪ್ರಿಲ್-ಮೇ ತಿಂಗಳಲ್ಲಿ ಶುಭ ಕಾರ್ಯಕ್ರಮಗಳು ಹೆಚ್ಚಿರುತ್ತಿದ್ದು, ಹೂವಿಗೆ ಹೆಚ್ಚಿನ ಬೇಡಿಕೆ ಇರುತ್ತಿತ್ತು. ಆದರೆ ಲಾಕ್ಡೌನ್ನಿಂದ ಹೂವಿಗೆ ಬೇಡಿಕೆ ಕುಸಿದಿದೆ. ಸರ್ಕಾರ ಹೂವು ಬೆಳೆಗಾರರಿಗೆ ನೆರವು ನೀಡಿದೆ.
ಆದರೆ ಹೂ ಮಾರುವವರಿಗೆ ನೆರವಿಗೆ ಯಾವುದೇ ನೆರವು ಘೋಷಿಸಿಲ್ಲ. ಹೀಗಾಗಿ ಮಾರಾಟಗಾರರ ಜೀವಿನ ಕಷ್ಟಕರವಾಗಿದ್ದು, ಪರಿಸ್ಥಿತಿ ಸುಧಾರಿಸಲು ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.