ವಿಜಯಪುರ:ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ ಪಲ್ಟಿಯಾದ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಮದ್ದಾಪುರ ಕ್ರಾಸ್ ಬಳಿ ನಡೆದಿದೆ. ಘಟನೆಯಲ್ಲಿ ಬಸ್ನಲ್ಲಿದ್ದ 10 ಪ್ರಯಾಣಿಕರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸರ್ಕಾರಿ ಬಸ್ ಪಲ್ಟಿ: 10 ಮಂದಿಗೆ ಗಾಯ - Government Bus
ನಿಡಗುಂದಿ ತಾಲೂಕಿನಲ್ಲಿ ಸರ್ಕಾರಿ ಬಸ್ವೊಂದು ಪಲ್ಟಿಯಾಗಿದೆ. ನಿದ್ದೆ ಮಂಪರಿನಲ್ಲಿದ್ದಾಗ ಅಚಾನಕ್ಕಾಗಿ ಬಸ್ ರಸ್ತೆ ಬದಿ ಪಲ್ಟಿಯಾದ್ದು ಘಟನೆಯಲ್ಲಿ 10 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬಸ್ ಪಲ್ಟಿ
ಬಾಗಲಕೋಟೆ ಡಿಪೋಗೆ ಸೇರಿದ ಬಸ್ ಇದಾಗಿದ್ದು ಬಾಗಲಕೋಟೆಯಿಂದ ಮುದ್ದೇಬಿಹಾಳಕ್ಕೆ ಹೊರಟಿದ್ದ ವೇಳೆ ಈ ಘಟನೆ ನಡೆದಿದೆ. ಬಸ್ನಲ್ಲಿ ಪ್ರಯಾಣಿಕರು ನಿದ್ದೆ ಮಂಪರಿನಲ್ಲಿದ್ದಾಗ ಅಚಾನಕ್ಕಾವಾಗಿ ಬಸ್ ರಸ್ತೆ ಬದಿ ಪಲ್ಟಿಯಾಗಿದೆ. ಘಟನೆ ನಡೆದ ತಕ್ಷಣ ಚಾಲಕ ಮತ್ತು ನಿರ್ವಾಹಕ ಪರಾರಿಯಾಗಿದ್ದಾರೆ.ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.