ವಿಜಯಪುರ:ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ತುಂಬಿ ಹರಿಯುತ್ತಿರುವ ಮಹಾರಾಷ್ಟ್ರದ ಉಜನಿ ಹಾಗೂ ವೀರ್ ಜಲಾಶಯಗಳಿಂದ ಭೀಮಾ ನದಿಗೆ 1,16,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ, ಗಡಿಭಾಗ ವಿಜಯಪುರ ಜಿಲ್ಲೆಯ ನದಿ ತಟದಲ್ಲಿ ಮತ್ತೊಮ್ಮೆ ಪ್ರವಾಹ ಭೀತಿ ಎದುರಾಗಿದೆ.
ಚಡಚಣ, ಇಂಡಿ ಹಾಗೂ ಆಲಮೇಲ ತಾಲೂಕುಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಸಮಾನಾಂತರದ 7 ಬ್ಯಾರೇಜ್ ಕಂ ಬ್ರಿಡ್ಜ್ಗಳು ಮುಳುಗಡೆಯಾಗಿವೆ. ಗೋವಿಂದಪುರ್-ಬಂಡಾರಕವಟೆ, ಉಮರಾಣಿ - ಲವಂಗಿ, ಔಜ್ - ಶಿರನಾಳ, ಹಿಂಗಣಿ - ಆಳಗಿ, ಖಾನಾಪೂರ - ಪಡನೂರ, ಹಿಳ್ಳಿ - ಗುಬ್ಬೇವಾಡ, ಚಣೇಗಾಂವ್ - ಬರೂರು ಬಾಂದಾರ್ಗಳು ಮುಳುಗಡೆಯಾಗಿವೆ.