ಕರ್ನಾಟಕ

karnataka

ETV Bharat / state

ಮದ್ದೇಬಿಹಾಳ: ಗೋವಾ ವಿಮೋಚನಾ ಹೋರಾಟಗಾರ ಹಣಮಪ್ಪ ಮೃತದೇಹ ನದಿಯಲ್ಲಿ ಪತ್ತೆ - kannada top news

ಕೆಲವರು ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಪೊಲೀಸರಿಗೆ ದೂರು ನೀಡಿರುವ ಹಣಮಪ್ಪ ಅವರ ಪುತ್ರಿ - ಗೋವಾ ವಿಮೋಚನಾ ಹೋರಾಟಗಾರರಾಗಿದ್ದ ಕಾರಣ ತಾಲೂಕು ಆಡಳಿತದಿಂದ ಗೌರವ.

goa-freedom-fighter-hanamappa-body-found-in-river
ಮದ್ದೇಬಿಹಾಳ: ಗೋವಾ ವಿಮೋಚನಾ ಹೋರಾಟಗಾರ ಹಣಮಪ್ಪ ಮೃತದೇಹ ನದಿಯಲ್ಲಿ ಪತ್ತೆ

By

Published : Jan 25, 2023, 10:01 PM IST

ಮುದ್ದೇಬಿಹಾಳ (ವಿಜಯಪುರ) : ತಾಳಿಕೋಟಿ ತಾಲೂಕಿನ ದೇವರ ಹುಲಗಬಾಳದ ಗೋವಾ ವಿಮೋಚನಾ ಹೋರಾಟಗಾರ ಹಣಮಪ್ಪ ಮುದಕಪ್ಪ ಚಲವಾದಿ (90) ಅವರ ಮೃತದೇಹ ಬುಧವಾರ ತಾಲೂಕಿನ ತಂಗಡಗಿ ಕೃಷ್ಣಾ ನದಿ ಸೇತುವೆಯ ಬಳಿ ಪತ್ತೆಯಾಗಿದೆ. ಬೆಳಗ್ಗೆಯೇ ಕಾರ್ಯಾಚರಣೆ ಆರಂಭಿಸಿದ ಅಗ್ನಿಶಾಮಕ ಧಳ, ತೀವ್ರ ಕಾರ್ಯಚರಣೆಯ ನಂತರ ಮದ್ಯಾಹ್ನದ ಹೊತ್ತಿಗೆ ಶವ ದೊರೆತಿದೆ.

ತಹಸೀಲ್ದಾರ್ ಬಿ.ಎಸ್​ ಕಡಕಭಾವಿ ಕೃಷ್ಣಾ ನದಿ ಸೇತುವೆಯ ಘಟನಾ ಸ್ಥಳದಲ್ಲಿದ್ದು ಪತ್ತೆಯಾದ ಹಣಮಪ್ಪ ಅವರ ಮೃತದೇಹವನ್ನು ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟರು. ಅಗ್ನಿಶಾಮಕ ತಂಡದಲ್ಲಿ ಅಧಿಕಾರಿ ರಮೇಶ ಚಾಳಣ್ಣವರ, ಸಿಬ್ಬಂದಿ ವಾಯ್.ಸಿ. ಪೊಲೇಶಿ, ವೀರೂಪಾಕ್ಷಿ ಪೂಜಾರಿ, ಮಸ್ತಾನ ಅಲಿ ಮುಲ್ಲಾಗೋಳ, ಸಂತೋಷ ಲಮಾಣಿ, ಮಹೇಶ ಕರಡ್ಡಿ, ಶಿವಾನಂದ ವಾಲೀಕಾರ, ಕಂದಾಯ ನಿರೀಕ್ಷಕ ಮಹಾಂತೇಶ ಮಾಗಿ ಇದ್ದರು.

ದೇವರ ಹುಲಗಬಾಳದ ಹಣಮಪ್ಪ ಚಲವಾದಿ ಅವರು ಗೋವಾ ವಿಮೋಚನಾ ಹೋರಾಟಗಾರರಾಗಿದ್ದ ಕಾರಣ ಅವರಿಗೆ ತಾಲೂಕು ಆಡಳಿತದಿಂದ ಗೌರವ ಸಲ್ಲಿಸಲಾಗುತ್ತದೆ ಎಂದು ತಹಸೀಲ್ದಾರ್ ಬಿ.ಎಸ್. ಕಡಕಭಾವಿ ತಿಳಿಸಿದ್ದಾರೆ. ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಯಲ್ಲಿ ಕುಟುಂಬಸ್ಥರನ್ನು ಭೇಟಿ ಮಾಡಿದ ಪಿಎಸ್​ಐ ಆರೀಫ್ ಮುಶಾಪುರಿ, ಘಟನೆಯ ಕುರಿತು ಚಲವಾದಿ ಕುಟುಂಬದವರಿಗೆ ಮಾಹಿತಿ ಸಂಗ್ರಹಿಸಿದ್ದಾರೆ.

ನದಿಗೆ ಹಾರುವ ಮುಂಚೆ ಸೇತುವೆ ದಡದಲ್ಲಿ ದೊರಕಿದ ದಾಖಲೆಗಳ ಜೊತೆಗೆ ಮೃತದೇಹದ ಜೊತೆಗೆ ಕೆಲವು ಮಹತ್ವದ ದಾಖಲೆಗಳು ಲಭ್ಯವಾಗಿವೆ ಎನ್ನಲಾಗಿದೆ. ಆದರೆ ಯಾವ ದಾಖಲೆಗಳು ಲಭ್ಯವಾಗಿವೆ ಎಂಬ ಬಗ್ಗೆ ಪೊಲೀಸರ ತನಿಖೆಯಿಂದಲೇ ಮಾಹಿತಿ ತಿಳಿದು ಬರಬೇಕಿದೆ. ಈ ಕುರಿತು ಅವರ ಪುತ್ರಿ ನೀಲಮ್ಮ ಚಲವಾದಿ ತಮ್ಮ ತಂದೆಯ ಸಾವಿಗೆ ಕೆಲವರು ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಂದೆಯನ್ನು ಕಳೆದುಕೊಂಡ ಕುಟುಂಬದವರ ದುಃಖ ಮುಗಿಲು ಮುಟ್ಟಿದ್ದು. ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಮೃತದೇಹಚ ತಂದಾಗ ತಂದೆಯನ್ನು ನೆನೆದು ಮಕ್ಕಳು ಬಿಕ್ಕಿ ಬಿಕ್ಕಿ ಅತ್ತರು. ಇದೇ ವೇಳೆ ಅಂಬೇಡ್ಕರ್ ಸೇನೆ ತಾಲೂಕಾಧ್ಯಕ್ಷ ಪ್ರಕಾಶ ಚಲವಾದಿ, ತಾಲೂಕಾ ಸಂಚಾಲಕ ದೇವರಾಜ ಹಂಗರಗಿ, ಮುಖಂಡ ಸಂಗಮೇಶ ವಿಜಯಕರ್, ಪಟೇಲ್ ಮೊದಲಾದವರು ಸ್ಥಳದಲ್ಲಿ ಉಪಸ್ಥಿತರಿದ್ದರು.

ಅತ್ಮಹತ್ಯೆ ಶಂಕೆ:ಕಳೆದ ಎರಡು-ಮೂರು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿರುವ ಹಣಮಪ್ಪ ಅವರು ತಂಗಡಗಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಬಳಿ ಓಡಾಡಿದ್ದಾರೆ ಎನ್ನಲಾಗಿತ್ತು. ಸೇತುವೆ ಮೇಲೆ ಅವರಿಗೆ ಸೇರಿರುವ ಮೊಬೈಲ್​ ಫೋನ್​, ಪಿಂಚಣಿ ಪಡೆಯುತ್ತಿದ್ದ ಪುಸ್ತಕ, ಚಪ್ಪಲಿ ನದಿಯ ದಡದಲ್ಲಿ ಸಿಕ್ಕಿದ್ದವು. ಇದರ ಅಧಾರದ ಮೇಲೆ ಹಣಮಪ್ಪ ಅವರು ನದಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವ್ಯಕ್ತವಾಗಿತ್ತು. ಈ ಬಗ್ಗೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಹಾಸನದಲ್ಲಿ ಗಾಂಧಿ ಪ್ರತಿಮೆ ವಿರೂಪ : ಸಾರ್ವಜನಿಕರಿಂದ ಆಕ್ರೋಶ

ABOUT THE AUTHOR

...view details