ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳದಲ್ಲಿ ಕೊಲೆಯಾದ ಅಪ್ರಾಪ್ತೆಯ ಗುರುತು ಪತ್ತೆ: ಪ್ರೀತಿಸಿದ್ದೇ ಘಟನೆಗೆ ಕಾರಣವಾಯ್ತಾ? - ಸಿಪಿಐ ಆನಂದ ವಾಘಮೋಡೆ

ಜೂನ್​​​​​ 9ರಂದು ಮುದ್ದೇಬಿಹಾಳ ತಾಲೂಕಿನ ಇಣಚಗಲ್ ಸೇತುವೆ ಕೆಳಗೆ ಪತ್ತೆಯಾಗಿದ್ದ ಮೃತದೇಹದ ಗುರುತು ಪತ್ತೆಯಾಗಿದೆ.

vijayapura
ಕೊಲೆಯಾದ ಅಪ್ರಾಪ್ತೆಯ ಗುರುತು ಪತ್ತೆ

By

Published : Jun 11, 2021, 8:04 AM IST

ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳತಾಲೂಕಿನ ಇಣಚಗಲ್ ಸೇತುವೆ ಕೆಳಗೆ ಜೂನ್​​​​​ 9ರಂದು ಅಪ್ರಾಪ್ತೆಯ ಮೃತದೇಹ ಪತ್ತೆಯಾಗಿತ್ತು. ಈ ಮೃತದೇಹ ನೋಡಿದ ದಾರಿಹೋಕರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ ಮೃತದೇಹದ ಗುರುತು ಪತ್ತೆಯಾಗಿದ್ದು, ಕೊಲೆಯಾಗಿರುವ ಯುವತಿ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್​​​ ಠಾಣಾ ವ್ಯಾಪ್ತಿಯ ಬಳುಂಡಗಿ ಗ್ರಾಮದ ಆರತಿ ಮಲ್ಲಪ್ಪ ಬಿಲ್ಲಾಡ (17) ಎಂದು ಗುರುತಿಸಲಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಿರುವ ಸಿಪಿಐ ಆನಂದ ವಾಘಮೋಡೆ, ಕೊಲೆಯಾಗಿರುವ ಅಪ್ರಾಪ್ತೆಗೆ ತಂದೆಯಿಲ್ಲ, ತಾಯಿ ಇದ್ದಾರೆ. ಇವರ ಮನೆಯ ಆಗುಹೋಗುಗಳನ್ನು ಯುವತಿಯ ಸೋದರ ಮಾವ ಎನ್ನಲಾದ ಸಿದ್ದರಾಮಪ್ಪ ಅವಟಿ ನೋಡಿಕೊಳ್ಳುತ್ತಿದ್ದ. ಯುವತಿಯನ್ನು ಆತನೇ ರಾತ್ರಿ ಮನೆಯಿಂದ ಕರೆದೊಯ್ದಿದ್ದ ಎಂದು ಮೃತಳ ತಾಯಿ ತಿಳಿಸಿದ್ದಾಳೆ. ಈ ಕೃತ್ಯವನ್ನು ಸಿದ್ದರಾಮಪ್ಪನೇ ಎಸಗಿರುವ ಅನುಮಾನ ವ್ಯಕ್ತವಾಗಿದ್ದು, ಸದ್ಯ ಆತ ತಲೆಮರೆಸಿಕೊಂಡಿದ್ದಾನೆ.

ಸೋದರಮಾವನ ಮಾತು ಕೇಳದೇ ಬೇರೊಬ್ಬನನ್ನು ಪ್ರೀತಿಸಿದ್ದಕ್ಕೆ ಆರತಿಯನ್ನು ಕೊಲೆ ಮಾಡಲಾಗಿದೆ ಎಂಬ ಆರೋಪವಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಪಿಐ ತಿಳಿಸಿದ್ದಾರೆ.

ಇದನ್ನೂ ಓದಿ:ಮುದ್ದೇಬಿಹಾಳದಲ್ಲಿ ಯುವತಿಯ ಬರ್ಬರ ಕೊಲೆ: ಸೇತುವೆ ಕೆಳಗಡೆ ಮೃತದೇಹ ಪತ್ತೆ!

ABOUT THE AUTHOR

...view details