ಕರ್ನಾಟಕ

karnataka

ETV Bharat / state

ಪ್ರಿಯಕರನ ಜೊತೆ ಮದುವೆ ಮಾಡಿಸುವುದಾಗಿ ನಂಬಿಸಿ ಸೊಸೆಯನ್ನೇ ಕೊಲೆಗೈದ ಸೋದರಮಾವ! - ಅಪ್ರಾಪ್ತೆಯ ಕೊಲೆ ಕೇಸ್

ಮುದ್ದೇಬಿಹಾಳ ತಾಲೂಕಿನ ಇಣಚಗಲ್ ಸೇತುವೆ ಕೆಳಗೆ ಅಪ್ರಾಪ್ತೆಯ ಶವ ಪತ್ತೆಯಾದ ಪ್ರಕರಣವನ್ನು ಬೇಧಿಸಿರುವ ಸಿಪಿಐ ಆನಂದ ವಾಘಮೋಡೆ ತಂಡ, ಆರೋಪಿಯನ್ನು ಬಂಧಿಸಿದೆ.

Girl Murdred in vijyapura
ಸೊಸೆಯನ್ನೇ ಕೊಲೆಗೈದ ಸೋದರಮಾವ

By

Published : Jun 16, 2021, 8:55 AM IST

Updated : Jun 16, 2021, 10:14 AM IST

ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳತಾಲೂಕಿನ ಜಮ್ಮಲದಿನ್ನಿ ಕ್ರಾಸ್ ಬಳಿಯ ಇಣಚಗಲ್ ಸೇತುವೆ ಕೆಳಗೆ ಜೂನ್​​​​​ 9ರಂದು ಅಪ್ರಾಪ್ತೆಯ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಒಂದೇ ವಾರದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆಯಾದ ಬಾಲಕಿಯನ್ನು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್​​​ ಠಾಣಾ ವ್ಯಾಪ್ತಿಯ ಬಳುಂಡಗಿ ಗ್ರಾಮದ ಆರತಿ ಮಲ್ಲಪ್ಪ ಬಿಲ್ಲಾಡ (17) ಎಂದು ಈಗಾಗಲೇ ಗುರುತಿಸಲಾಗಿದೆ.

ಇದನ್ನೂ ಓದಿ:ಮುದ್ದೇಬಿಹಾಳದಲ್ಲಿ ಕೊಲೆಯಾದ ಅಪ್ರಾಪ್ತೆಯ ಗುರುತು ಪತ್ತೆ: ಪ್ರೀತಿಸಿದ್ದೇ ಘಟನೆಗೆ ಕಾರಣವಾಯ್ತಾ?

ಡಿವೈಎಸ್ಪಿ ಅರುಣಕುಮಾರ ಕೋಳೂರ ಮಾರ್ಗದರ್ಶನದಲ್ಲಿ ಸಿಪಿಐ ಆನಂದ ವಾಘಮೋಡೆ ತಂಡ ಪ್ರಕರಣದ ಬೆನ್ನು ಹತ್ತಿತ್ತು. ಇದೀಗ ಬಾಲಕಿಯ ಸೋದರಮಾವ ಸಿದ್ರಾಮಪ್ಪ ಕಲ್ಲಪ್ಪ ಅವಟಿ (43) ಎಂಬಾತನೇ ಕೊಲೆ ಆರೋಪಿ ಎಂಬುದು ತನಿಖೆಯಿಂದ ಬಯಲಾಗಿದೆ. ಆರೋಪಿಯು ದೇವರಹಿಪ್ಪರಗಿಯ ಮಲ್ಲಯ್ಯನ ಗುಡಿಯಲ್ಲಿ ತಲೆಮರೆಸಿಕೊಂಡಿರುವ ಖಚಿತ ಮಾಹಿತಿ ಮೇರೆಗೆ ಎಸ್​ಐ ವಿನೋದ ದೊಡ್ಡಮನಿ ಕಾರ್ಯಾಚರಮೆ ನಡೆಸಿ ಬಂಧಿಸಿದ್ದಾರೆ.

'ಪ್ರೀತಿ'ಯ ಕೊಲೆ

ಕೊಲೆಯಾಗಿರುವ ಅಪ್ರಾಪ್ತೆಗೆ ತಂದೆಯಿಲ್ಲ, ತಾಯಿ ಇದ್ದಾರೆ. ಇವರ ಮನೆಯ ಆಗುಹೋಗುಗಳನ್ನು ಬಾಲಕಿಯ ಸೋದರಮಾವ ಸಿದ್ದರಾಮಪ್ಪನೇ ನೋಡಿಕೊಳ್ಳುತ್ತಿದ್ದ. ಈ ಮಧ್ಯೆ ಆರತಿ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಜೊತೆಗಿರುವ ಫೋಟೋವನ್ನು ಆಕೆಯ ಪ್ರಿಯತಮ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಇದರಿಂದ ಕುಪಿತಗೊಂಡ ಸಿದ್ರಾಮಪ್ಪ, ಅದೇ ಯುವಕನೊಂದಿಗೆ ಕೂಡಲಸಂಗಮದಲ್ಲಿ ಮದುವೆ ಮಾಡಿಸುವುದಾಗಿ ಆರತಿಯನ್ನು ರಾತ್ರಿ ಮನೆಯಿಂದ ಕರೆದುಕೊಂಡು ಹೋಗಿ ಜಮ್ಮಲದಿನ್ನಿ ಕ್ರಾಸ್ ಬಳಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಇದನ್ನೂ ಓದಿ:ಮುದ್ದೇಬಿಹಾಳದಲ್ಲಿ ಯುವತಿಯ ಬರ್ಬರ ಕೊಲೆ: ಸೇತುವೆ ಕೆಳಗಡೆ ಮೃತದೇಹ ಪತ್ತೆ!

Last Updated : Jun 16, 2021, 10:14 AM IST

ABOUT THE AUTHOR

...view details