ಕರ್ನಾಟಕ

karnataka

ETV Bharat / state

ಸರ್ಕಾರಿ ಆಸ್ಪತ್ರೆಗಳ ನಿರ್ವಹಣಾ ಜವಾಬ್ದಾರಿ ಖಾಸಗಿಯವರ ಕೈಗೆ: ವಿಜಯಪುರ ಜಿ.ಪಂ. ಸಭೆಯಲ್ಲಿ ಗದ್ದಲ - ವಿಜಯಪುರ ಜಿಲ್ಲಾ ಪಂಚಾಯತ್​ ಅಧ್ಯಕ್ಷ ಶಿವಯೋಗಿ ನೇದಲಗಿ

ಆರೋಗ್ಯ ಬಂಧು ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳ ನಿರ್ವಹಣೆಯ ಜವಾಬ್ದಾರಿಯನ್ನು, ಖಾಸಗಿ ಸಂಘ-ಸಂಸ್ಥೆಗಳಿಗೆ ನೀಡಲಾಗಿದೆ. ಈ ಕ್ರಮದ ಕುರಿತಾಗಿ ಜಿಲ್ಲಾ ಪಂಚಾಯತ್​ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ವೇಳೆ ಗದ್ದಲ ಉಂಟಾಗಿ ಸದಸ್ಯನೋರ್ವ ಸಭಾ ತ್ಯಾಗ ಮಾಡಿದ್ರು.

ಜಿಲ್ಲಾ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಗದ್ದಲ
ಜಿಲ್ಲಾ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಗದ್ದಲ

By

Published : Dec 24, 2019, 10:00 AM IST

ವಿಜಯಪುರ:ಆರೋಗ್ಯ ಬಂಧು ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳ ನಿರ್ವಹಣೆಯ ಜವಾಬ್ದಾರಿಯನ್ನು, ಖಾಸಗಿ ಸಂಘ-ಸಂಸ್ಥೆಗಳಿಗೆ ನೀಡಿರುವುದು ಜಿಲ್ಲಾ ಪಂಚಾಯತ್​ ಸದಸ್ಯರನ್ನು ಕೆರಳಿಸಿದೆ. ಈ ಕ್ರಮದ ಕುರಿತು ಜಿಲ್ಲಾ ಪಂಚಾಯತ್​ 16ನೇ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಇದರಲ್ಲಿ ₹ 1.43 ಕೋಟಿ ಅವ್ಯವಹಾರ ನಡೆದಿದೆ ಎನ್ನಲಾಗ್ತಿದೆ. ಈ ಬಗ್ಗೆ ತನಿಖೆ ನಡೆಸಲು, ಎಸಿಬಿಗೆ ವಹಿಸಿ ಎಂದು ಜಿ.ಪಂ. ಸದಸ್ಯರು ಒತ್ತಾಯಿಸಿದರು. ಆದ್ರೆ ಸದಸ್ಯರ ಮನವಿಗೆ ಅಧ್ಯಕ್ಷ ಶಿವಯೋಗಿ ನೇದಲಗಿ ಅನುಮತಿ ನೀಡಲಿಲ್ಲ. ಇದರಿಂದ ಬೇಸತ್ತ ಸದಸ್ಯರೊಬ್ಬರು ಸಭಾತ್ಯಾಗ ಮಾಡಿದರು.

ಜಿಲ್ಲಾ ಪಂಚಾಯತ್​ ಸಾಮಾನ್ಯ ಸಭೆಯಲ್ಲಿ ಗದ್ದಲ

ಗ್ರಾಮೀಣ ಜನತೆಗೆ ಉತ್ತಮ ಆರೋಗ್ಯ ಸಿಗಬೇಕು. ಅದನ್ನು ಸರ್ಕಾರ ನಿರ್ವಹಿಸಬೇಕು. ಅದು ಬಿಟ್ಟು, ಖಾಸಗಿ ಸಂಘ-ಸಂಸ್ಥೆಗಳಿಗೆ ನೀಡಿದ್ದನ್ನು ರದ್ದುಗೊಳಿಸಬೇಕೆಂದು ಸದಸ್ಯರು ಒತ್ತಾಯಿಸಿದರು. ಇದರಿಂದಾಗಿ ಕೆಲಕಾಲ ಸಭೆಯಲ್ಲಿ ಗದ್ದಲ ಉಂಟಾಗಿತ್ತು.

ABOUT THE AUTHOR

...view details