ವಿಜಯಪುರ :ತೋಟದ ಮನೆಯಲ್ಲಿ ಅಡುಗೆ ಸಿಲೆಂಡರ್ ಸ್ಪೋಟವಾಗಿ ಲಕ್ಷಾಂತರ ಮೌಲ್ಯ ವಸ್ತುಗಳು ಸುಟ್ಟು ಭಸ್ಮವಾದ ಘಟನೆ ಚಡಚಣ ತಾಲೂಕಿನ ಮರಗೂರು ಗ್ರಾಮದಲ್ಲಿ ನಡೆದಿದೆ.
ಅಡುಗೆ ಸಿಲಿಂಡರ್ ಸ್ಪೋಟ .. ಚಡಚಣದಲ್ಲಿ ಅಪಾರ ಮೌಲ್ಯದ ಚಿನ್ನ, ದವಸ ಧಾನ್ಯಗಳು ಭಸ್ಮ - etv bharat
ತೋಟದ ಮನೆಯಲ್ಲಿ ಅಡುಗೆ ಸಿಲೆಂಡರ್ ಸ್ಪೋಟವಾಗಿ ಶೆಡ್ನಲ್ಲಿದ್ದ 30 ಗ್ರಾಂ ಚಿನ್ನಾಭರಣ, 40,000 ನಗದು, 15 ಮೂಟೆ ಶೇಂಗಾ, 5 ಮೂಟೆ ಜೋಳ, 2 ಮೂಟೆ ಗೋಧಿ ಬೆಂಕಿಗಾಹುತಿಯಾಗಿರುವ ಘಟನೆ ಚಡಚಣ ತಾಲೂಕಿನ ಮರಗೂರು ಗ್ರಾಮದಲ್ಲಿ ನಡೆದಿದೆ.
ಅಡುಗೆ ಸಿಲಿಂಡರ್ ಸ್ಪೋಟ
ಶೆಡ್ನಲ್ಲಿದ್ದ 30 ಗ್ರಾಂ ಚಿನ್ನಾಭರಣ, 40,000 ನಗದು, 15 ಮೂಟೆ ಶೇಂಗಾ, 5 ಮೂಟೆ ಜೋಳ, 2 ಮೂಟೆ ಗೋಧಿ ಬೆಂಕಿಗಾಹುತಿಯಾಗಿವೆ. ಅಷ್ಟೇ ಅಲ್ಲದೇ ಪಕ್ಕದ ಗುಡಿಸಲಿಗೂ ಬೆಂಕಿ ವ್ಯಾಪಿಸಿದ್ದು, ಆ ಗುಡಿಸಲಿನಲ್ಲಿದ್ದ 15,000 ರೂ. ನಗದು, 5 ಗ್ರಾಂ ಚಿನ್ನ, ದವಸ ಧಾನ್ಯ ಭಸ್ಮವಾಗಿದೆ.
ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಈ ಸಂಬಂಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.