ವಿಜಯಪುರ: ಚಿಕನ್ ಪೀಸ್‌ನಲ್ಲಿ ಜೈಲಿನ ಖೈದಿಗಳಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿರುವ ಪೊಲೀಸರು ಅಪಾರ ಪ್ರಮಾಣದ ಗಾಂಜಾ ವಶಪಡಿಸಿಕೊಂಡಿರುವ ಘಟನೆ ನಗರದ ದರ್ಗಾ ಜೈಲಿನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪ್ರಜ್ವಲ್ ಲಕ್ಷ್ಮಣ ಮಾಬರುಖಾನೆ ವಿರುದ್ಧ ಪ್ರಕರಣ ದಾಖಲಾಗಿದೆ.
ಚಿಕನ್ ಪೀಸ್ ನಲ್ಲಿ ಜೈಲಿನ ಖೈದಿಗಳಿಗೆ ಗಾಂಜಾ ಸಾಗಾಟ.. ಆರೋಪಿ ವಶಕ್ಕೆ - ಈಟಿವಿ ಭಾರತ ಕನ್ನಡ
ಚಿಕನ್ ಪೀಸ್ ನಲ್ಲಿ ಜೈಲಿನ ಖೈದಿಗಳಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಚಿಕನ್ ಪೀಸ್ ನಲ್ಲಿ ಜೈಲಿನ ಖೈದಿಗಳಿಗೆ ಗಾಂಜಾ ಸಾಗಾಟ : ಆರೋಪಿ ವಶಕ್ಕೆ
ಖೈದಿ ಶಾರುಕ್ಬಾನ್ ತೆಗರತಿಪ್ಪಿಗೆ ಚಿಕನ್ ಪೀಸ್‌ನಲ್ಲಿ ಪ್ರಜ್ವಲ್ ಗಾಂಜಾ ಸಾಗಾಟ ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ದೊಡ್ಡ ದೊಡ್ಡ ಚಿಕನ್ ಪೀಸ್‌ನಲ್ಲಿ 2 ಗ್ರಾಂನಷ್ಟು, ಒಟ್ಟು 18 ಪಾಕೆಟ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಮೊದಲ ಬಾರಿಗೆ ಚೆನ್ನೈ ಏರ್ಪೋರ್ಟ್ನಲ್ಲಿ 100 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶ