ವಿಜಯಪುರ :ಶಾಂತಿನಿಕೇತನ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ರೇವಣ್ಣ ಡೊಣಗಿ ಎಂಬ ಬಾಲಕ ಹಲವು ದಾಖಲೆಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಮಾಡಿದ್ದಾನೆ. ಕೇವಲ 26 ಸೆಂಕೆಂಡ್ನಲ್ಲಿ ಗಾಂಧೀಜಿ ಭಾವಚಿತ್ರ ಬಿಡಿಸಿ, ವಿಶ್ವ ದಾಖಲೆ ಬರೆದಿದ್ದಾನೆ.
ಬಾಲಕನ ಈ ಪ್ರತಿಭೆಗೆ ನೀರೆರೆದವರು ಇವರ ತಂದೆ ಶ್ರೀಮಂತ ಡೋಣಗಿ ಎಂಬುವರು. ಆನ್‌ಲೈನ್ ಮೂಲಕ ಚಿತ್ರಬಿಡಿಸುವ ಸ್ಪರ್ಧೆಯಲ್ಲಿ ಜಯ ಸಾಧಿಸಿ ಹೈರೇಂಜ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಗಳಿಸುವ ಮೂಲಕ ವಿಶ್ವ ದಾಖಲೆ ಬರೆದಿದ್ದಾನೆ.
ಅಷ್ಟೇ ಅಲ್ಲ, ನಾಣ್ಯ ಸಂಗ್ರಹದಲ್ಲಿಯೂ ಆಸಕ್ತಿ ಹೊಂದಿರುವ ಬಾಲಕ ರೇವಣ್ಣ 2, 5, 10, 20, 25, 50 ಪೈಸೆ ಸೇರಿ ಎಲ್ಲ ರೀತಿಯ ನಾಣ್ಯಗಳನ್ನು ಸಂಗ್ರಹಿಸಿದ್ದಾನೆ. 1992ರಿಂದ ಹಿಡಿದು 2019ರವರೆಗೆ 5ರೂ. ನಾಣ್ಯ, ಮಹಾನ ವ್ಯಕ್ತಿಗಳ ಭಾವಚಿತ್ರವಿರುವ ನಾಣ್ಯ, ಗೋಲ್ಡನ್, ಸಿಲ್ವರ್ ಸೇರಿ ವಿವಿಧ ರೀತಿಯ ನಾಣ್ಯಗಳನ್ನು ಸಂಗ್ರಹಿಸಿದ್ದಾನೆ. ಇದಕ್ಕಾಗಿ ಈತನಿಗೆ ಚೋಳನ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದ್ದಾನೆ.