ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳ: ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಯೋಧ ಸುನೀಲ್ ಅಂತ್ಯಕ್ರಿಯೆ - ಮುದ್ದೇಬಿಹಾಳ ಯೋಧನ ಅಂತ್ಯಕ್ರಿಯೆ

ಯೋಧ ಸುನೀಲ್ ಆನಂದ ವಿಭೂತಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

funeral of warrior Sunil was accomplished with government honors
ಮೃತ ಯೋಧ ಸುನೀಲ್ ಆನಂದ ವಿಭೂತಿ ಅವರ ಅಂತ್ಯಕ್ರಿಯೆ

By

Published : May 18, 2022, 8:48 AM IST

Updated : May 18, 2022, 9:19 AM IST

ಮುದ್ದೇಬಿಹಾಳ(ವಿಜಯಪುರ):ಬೈಕ್ ಅಪಘಾತದಲ್ಲಿ ಮೃತಪಟ್ಟ ಯೋಧ ಸುನೀಲ್ ಆನಂದ ವಿಭೂತಿ ಮೃತದೇಹದ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ನೆರವೇರಿಸಲಾಗಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪಾರ್ಥಿವ ಶರೀರವನ್ನು ತಂಗಡಗಿ ರಸ್ತೆಯ ಮೂಲಕ ಸೈನಿಕ ಮೈದಾನಕ್ಕೆ ತಂದು ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.


ಈ ಸಂದರ್ಭದಲ್ಲಿ ತಾಲೂಕಿನ ಪ್ರಮುಖ ಅಧಿಕಾರಿಗಳು, ಪೊಲೀಸ್ ಇಲಾಖೆ ಸೇರಿದಂತೆ ಹಲವರು ನಮನ ಸಲ್ಲಿಸಿದರು. ಬಳಿಕ ಮೆರವಣಿಗೆ ಮೂಲಕ ಮೃತದೇಹವನ್ನು ಗೆದ್ದಲಮರಿ ಗ್ರಾಮಕ್ಕೆ ತರಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದಂತೆ ಯೋಧನಿಗೆ ಪೊಲೀಸ್ ಇಲಾಖೆಯಿಂದ ಗೌರವ ಸಮರ್ಪಣೆ ನಡೆಯಿತು. ಸಶಸ್ತ್ರ ಸೀಮಾ ಪಡೆಯ ಹವಾಲ್ದಾರ್ ಜಿ.ಎಸ್.ಮಠ ನೇತೃತ್ವದಲ್ಲಿ ಪೊಲೀಸರು ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು.

ಇದನ್ನೂ ಓದಿ:ಅಕ್ಕನ ಮದುವೆಗೆ ಬಂದಿದ್ದ ಯೋಧ ಅಪಘಾತದಲ್ಲಿ ಸಾವು: ಇಂದು ಅಂತ್ಯಕ್ರಿಯೆ

Last Updated : May 18, 2022, 9:19 AM IST

ABOUT THE AUTHOR

...view details