ಕರ್ನಾಟಕ

karnataka

ETV Bharat / state

ಲಾಕ್​ಡೌನ್: ವಿಜಯಪುರ ಜಿಲ್ಲಾಡಳಿತದಿಂದ ಬಡವರಿಗೆ ಹಾಲು ವಿತರಣೆ

ಲಾಕ್​ಡೌನ್ ನಡುವೆಯೂ ರಾಜ್ಯ ಸರ್ಕಾರ ಬಡವರಿಗೆ ಉಚಿತವಾಗಿ ಹಾಲು ನೀಡಿತ್ತಿದೆ. ವಿಜಯಪುರ ನಗರದಲ್ಲಿ ಮಹಾನಗರ ಪಾಲಿಕೆಯು ಪ್ರತಿ ದಿನ ಒಂದು ಕುಟುಂಬಕ್ಕೆ ಬಂದು ಲೀಟರ್ ಹಾಲು ನೀಡುತ್ತಿದೆ.

milk
ಉಚಿತ ಹಾಲು ಹಂಚಿಕೆ‌

By

Published : Apr 7, 2020, 4:38 PM IST

ವಿಜಯಪುರ: ಸ್ಲಂ ಪ್ರದೇಶದ ಬಡವರ ಮನೆ ಮನೆಗಳಿಗೆ ತೆರಳಿ ಜನತೆಗೆ ಜಿಲ್ಲಾಡಳಿತ ಉಚಿತ ಹಾಲು ಹಂಚಿಕೆ‌ ಮಾಡುತ್ತಿದೆ.

ಲಾಕ್​​ಡೌನ್ ನಡುವೆಯೂ ರಾಜ್ಯ ಸರ್ಕಾರ ಬಡವರಿಗೆ ಉಚಿತವಾಗಿ ಹಾಲು ನೀಡುತ್ತಿದೆ. ವಿಜಯಪುರ ನಗರದಲ್ಲಿ ಮಹಾನಗರ ಪಾಲಿಕೆ ಮೂಲಕ ಸ್ಥಳೀಯ ಸ್ವಸಹಾಯ ಸಂಘಗಳ ಸದಸ್ಯರನ್ನ ಬಳಸಿಕೊಂಡು ಹಾಲು ವಿತರಣೆ ಮಾಡಲಾಗುತ್ತಿದೆ.

ಉಚಿತ ಹಾಲು ಹಂಚಿಕೆ‌

ಪ್ರತಿ ದಿನ ಒಂದು ಕುಟುಂಬಕ್ಕೆ ಬಂದು ಲೀಟರ್ ಹಾಲು ನೀಡಲಾಗುತ್ತಿದೆ. ಖುದ್ದಾಗಿ ಅಧಿಕಾರಿಗಳೇ ಮನೆ ಮನೆಗೆ ತೆರಳಿ ಹಾಲು ಹಂಚಿಕೆ ಮಾಡುವ ಜವಾಬ್ದಾರಿಯನ್ನು ಜಿಲ್ಲಾಡಳಿತ ನೀಡಿದೆ‌.

15 ಸಾವಿರಕ್ಕೂ ಅಧಿಕ ಲೀಟರ್ ಹಾಲನ್ನು ಕೊಳಗೇರಿ ಪ್ರದೇಶದ ಜನರಿಗೆ, ಬಡ ಕುಟುಂಬಗಳಿಗೆ ಹಾಗೂ ಅಲೆಮಾರಿ ಜನಾಂಗದವರಿಗೆ ಜಿಲ್ಲಾಡಳಿತ ಕೆಎಂಎಫ್ ಮೂಲಕ ಹಾಲು ವಿತರಣೆ ಮಾಡುತ್ತಿದೆ.

ABOUT THE AUTHOR

...view details