ವಿಜಯಪುರ: ಮುದ್ದೇಬಿಹಾಳ ಪಟ್ಟಣದ ಎಪಿಎಂಸಿ ಸನಿಹದಲ್ಲಿರುವ ಮಾರುಕಟ್ಟೆಯಲ್ಲಿ ವ್ಯಾಪಾರಿಗಳ ಮೇಲೆ ಜೇನು ನೊಣಗಳು ದಾಳಿ ಮಾಡಿವೆ.
ಗೂಡಿಗೆ ಕಲ್ಲೆಸೆದ ಕಿಡಿಗೇಡಿಗಳು: ಜೇನು ದಾಳಿಯಿಂದ ನಾಲ್ವರಿಗೆ ಗಂಭೀರ ಗಾಯ - Honey attack at Muddebihala in Vijayapura
ದನದ ಮಾರುಕಟ್ಟೆಯಲ್ಲಿನ ಮರದಲ್ಲಿ ಹೆಜ್ಜೇನುಗಳ ಗೂಡು ಇದ್ದು, ಯಾರೋ ಕಿಡಿಗೇಡಿಗಳು ಅದರ ಮೇಲೆ ಕಲ್ಲೆಸೆದ ಕಾರಣ, ಜೇನು ನೊಣಗಳು ಸಮೀಪದಲ್ಲಿದ್ದ ಜನರ ಮೇಲೆ ದಾಳಿ ಮಾಡಿವೆ.
ಜೇನು ದಾಳಿಗೆ ನಾಲ್ವರು ಗಂಭೀರ
ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದನದ ಮಾರುಕಟ್ಟೆಯಲ್ಲಿನ ಮರದಲ್ಲಿ ಹೆಜ್ಜೇನುಗಳ ಗೂಡು ಇದ್ದು, ಯಾರೋ ಕಿಡಿಗೇಡಿಗಳು ಅದರ ಮೇಲೆ ಕಲ್ಲು ಎಸೆದ ಪರಿಣಾಮ ಈ ಅನಾಹುತ ಸಂಭವಿಸಿದೆ.
ಘಟನೆ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.