ಕರ್ನಾಟಕ

karnataka

ETV Bharat / state

ಭೀಮಾನದಿಯಲ್ಲಿ ಈಜಲು ಹೋದ ನಾಲ್ಕು ಮಕ್ಕಳು ನಾಪತ್ತೆ: ಓರ್ವ ಬಾಲಕಿಯ ಶವ ಪತ್ತೆ - ವಿಜಯಪುರದ ಭೀಮಾ ನದಿಯಲ್ಲಿ ಈಜಲುಇ ಹೋಗಿ ಮಕ್ಕಳು ಸಾವು ಸುದ್ದಿ

ಈಜಲು ಹೋಗಿದ್ದ ವೇಳೆ ಭೀಮಾ ನದಿಯಲ್ಲಿ ನಾಲ್ವರು ಮಕ್ಕಳು ಕೊಚ್ಚಿ ಹೋಗಿದ್ದು, ಓರ್ವ ಬಾಲಕಿಯ ಮೃತದೇಹ ದೊರೆತಿದೆ. ಉಳಿದ ಮೂವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

Four children dead in Bheema river
ಭೀಮಾನದಿಯಲ್ಲಿ ಈಜಲು ಹೋಗಿ ನಾಲ್ಕು ಮಕ್ಕಳ ಸಾವು

By

Published : May 30, 2021, 2:11 PM IST

ವಿಜಯಪುರ:ಈಜಲು ಹೋಗಿದ್ದ ವೇಳೆ ಭೀಮಾ ನದಿ ನೀರಲ್ಲಿ ಕೊಚ್ಚಿ ಹೋಗಿ ನಾಲ್ಕು ಮಕ್ಕಳು ನಾಪತ್ತೆಯಾಗಿರುವ ಘಟನೆ ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿರುವ ಲವಗಿ ಗ್ರಾಮದ ಬಳಿ ನಡೆದಿದೆ.

ನಿನ್ನೆ ಸಂಜೆ ಈಜಲು ತರಳಿದ್ದ ವೇಳೆ ನದಿಯಲ್ಲಿ ಮಕ್ಕಳು ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಮಕ್ಕಳ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ.

ಲವಗಿ ಗ್ರಾಮದ ಶಿವಾನಂದ ಪಾರ್ಶೆಟ್ಟಿ ಅವರ ಮಕ್ಕಳಾದ ಆರತಿ(13), ವಿಠ್ಠಲ(10) ಹಾಗೂ ಶಿವಾಜಿ ತಾನವಡೆ ಎಂಬುವವರ ಮಕ್ಕಳಾದ ಸಮೀಕ್ಷಾ(14), ಅರ್ಪಿತಾ(13) ನೀರುಪಾಲಾಗಿದ್ದಾರೆ.

ಆರತಿ ಮೃತದೇಹ ಮಾತ್ರ ಸಿಕ್ಕಿದ್ದು, ಉಳಿದ ಮೂವರಿಗಾಗಿ ಶೋಧ ಮುಂದುವರೆದಿದೆ. ಕುಟುಂಬಸ್ಥರು ಮನೆ ಕೆಲಸದಲ್ಲಿ ತೊಡಗಿದ್ದಾಗ ಮಕ್ಕಳು ನದಿಯಲ್ಲಿ ಸ್ಥಾನಕ್ಕೆ ತೆರಳಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಸಿಕ್ಕಿಹಾಕಿಕೊಂಡಿದ್ದಾರೆ ಎಬಂ ಮಾಹಿತಿ ಲಭ್ಯವಾಗಿದೆ.

ಮಹಾರಾಷ್ಟ್ರದ ಮಂದ್ರೂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

ABOUT THE AUTHOR

...view details