ವಿಜಯಪುರ:ಕೃತಕ ಗರ್ಭಧಾರಣೆಯಿಂದ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆ ಜಿಲ್ಲೆಯ ಮುದನೂರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಯಲ್ಲಿ ನಡೆದಿದೆ.
ದಾಲಿಬಾಯಿ ಸಗನಲಾಲ್ ಎಂಬ 40 ವರ್ಷದ ಮಹಿಳೆ ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಸದ್ಯ ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಮುದುನೂರು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ; ಆಕೆಗೆ ವಯಸ್ಸೆಷ್ಟು ಗೊತ್ತಾ..? ವಂಶ ಬೆಳೆಸಲು ಗಂಡು ಮಗು ಬೇಕೆಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರನಾಳ ಶಿಶು ( ಟೆಸ್ಟ್ ಟ್ಯೂಬ್) ಶಸ್ತ್ರ ಚಿಕಿತ್ಸೆ ಮಾಡಿಕೊಂಡಿದ್ದರು. ಬಳಿಕ ಮೂರು ತಿಂಗಳಾದ ಮೇಲೆ ತಾಯಿಯ ಗರ್ಭದಲ್ಲಿ ನಾಲ್ಕು ಮಕ್ಕಳು ಇರುವುದಾಗಿ ವೈದ್ಯರು ತಿಳಿಸಿದ್ದರು. ಈಗ ಎಂಟು ತಿಂಗಳ ಕೊನೆಯಲ್ಲಿ 4 ಮಕ್ಕಳಿಗೆ ದಾಲಿಬಾಯಿ ಜನ್ಮ ನೀಡಿದ್ದಾಳೆ.
ಮೂಲತಃ ದಾಲಿಬಾಯಿ ರಾಜಸ್ಥಾನ ರಾಜ್ಯದ ಜಾಲೋರ ಜಿಲ್ಲೆಯ ನೌಸ್ರಾ ಎಂಬ ಗ್ರಾಮದವರಾಗಿದ್ದು. ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.