ಮುದ್ದೇಬಿಹಾಳ (ವಿಜಯಪುರ): ಕೊರೊನಾ ಮಹಾಮಾರಿ ಒಂದೆಡೆ ಜನರನ್ನು ಬಲಿ ಪಡೆಯುತ್ತಿದ್ದರೆ ಮತ್ತೊಂದೆಡೆ ವೈರಸ್ ಪ್ರಸರಣ ನಿಯಂತ್ರಣಕ್ಕೆ ಜಾರಿಗೊಳಿಸಿರುವ ಲಾಕ್‌ಡೌನ್ ಪರಿಣಾಮದಿಂದಲೂ ರೈತರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಅನ್ನದಾತ ಹೈರಾಣಾಗಿದ್ದಾನೆ. ಇದೀಗ ಮುದ್ದೇಬಿಹಾಳ ರೈತನೋರ್ವ ತನ್ನ ಜಮೀನಿನಲ್ಲಿ ಬೆಳೆದಿದ್ದ ಸುಮಾರು 6 ಸಾವಿರ ಬಾಳೆ ಗಿಡಗಳನ್ನು ನೆಲಸಮ ಮಾಡಿ ಹತಾಶೆ ವ್ಯಕ್ತಪಡಿಸಿದ್ದಾನೆ.
ತಾಲೂಕಿನ ನೇಬಗೇರಿ ಗ್ರಾಮದ ರೈತ ಮಹಿಳೆ ಸಂಗಮ್ಮ ಹಿರೇಮಠ ಎಂಬುವರು 5 ಎಕರೆ ಹೊಲದಲ್ಲಿ ಅಂದಾಜು ಆರು ಸಾವಿರ ಬಾಳೆ ಗಿಡಗಳನ್ನು ಬೆಳೆದಿದ್ದರು. ಪ್ರತಿ ಕೆ.ಜಿ 2-3 ರೂ.ನಂತೆಯೂ ಬಾಳೆ ಕೇಳುವವರಿಲ್ಲ. ಆದ್ರೆ ಕೂಲಿಗೆ ಬಂದವರಿಗೆ 200 ರೂಪಾಯಿ ಕೊಡಬೇಕಾಗುತ್ತದೆ. ಬಾಳೆ ಬೆಳೆಯನ್ನು ತೆಗೆಯಬೇಕಾದರೆ ಕೂಲಿಕಾರರಿಗೆ ಬೆಳೆ ಮಾರಿದ ಹಣಕ್ಕಿಂತ ದುಪ್ಪಟ್ಟು ಹಣ ನೀಡಬೇಕಿದೆ.