ವಿಜಯಪುರ :ಅಹಿಂದ ವ್ಯಕ್ತಿ ಸಿದ್ದರಾಮಯ್ಯ ಸಿಎಂ ಆದಾಗ ನೀವೆಲ್ಲ 10% ಸರ್ಕಾರ ಎಂದು ಆರೋಪಿಸಿದ್ದೀರಿ. ಈಗ ಬಿಜೆಪಿ ಸರ್ಕಾರ 20% ಪರ್ಸೆಂಟ್ ಸರ್ಕಾರ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಶಾಸಕ ಸಿ ಎಸ್ ನಾಡಗೌಡ ಹರಿಹಾಯ್ದಿದ್ದಾರೆ.
ಬಿಜೆಪಿ ಸರ್ಕಾರ 20% ಪರ್ಸೆಂಟ್ ಸರ್ಕಾರ.. ಮಾಜಿ ಶಾಸಕ ಸಿ ಎಸ್ ನಾಡಗೌಡ ವಾಗ್ದಾಳಿ - Former MLA CS Nadagouda barrage Aginest BJP
ಮುಂದೊಂದು ದಿನ ಕುದುರೆ ಎಂದುಕೊಂಡು ನಿಮ್ಮನ್ನೂ ಮಾರಿಬಿಡುತ್ತಾರೆ ಎಚ್ಚರದಿಂದ ಇರಿ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ಧ ಮಾಜಿ ಶಾಸಕ ಸಿ ಎಸ್ ನಾಡಗೌಡ ಲೇವಡಿ..

ಮಾಜಿ ಶಾಸಕ ಸಿ.ಎಸ್ ನಾಡಗೌಡ ವಾಗ್ದಾಳಿ
ಮುದ್ದೇಬಿಹಾಳದಲ್ಲಿ ಮಾತನಾಡಿದ ಅವರು, ಯಾವುದೇ ಭ್ರಷ್ಟಾಚಾರ ಮಾಡದ ವ್ಯಕ್ತಿ ಮೇಲೆ ಸುಮ್ಮನೆ ಆರೋಪ ಮಾಡಿದ್ದೀರಿ. ಈಗ ನಿಮ್ಮ ಸರ್ಕಾರದಲ್ಲಿ ಏನು ನಡೆದಿದೆ. ನಿಮ್ಮದು 20% ಪರ್ಸೆಂಟ್ ಸರ್ಕಾರವಾಗಿದೆ. ಕುದುರೆ ವ್ಯಾಪಾರ ಮಾಡೋರಿಗೆ ಅವಕಾಶ ಕೊಡಬೇಡಿ. ಕುದುರೆ ವ್ಯಾಪಾರ ಮಾಡೋರೆಲ್ಲ ವಿಧಾನಸೌಧದಲ್ಲಿ ಕುಳಿತರೆ ರಾಜಕೀಯದಲ್ಲಿ ನಿಯತ್ತು ಇರೋದಿಲ್ಲ ಎಂದರು.
ಮಾಜಿ ಶಾಸಕ ಸಿ ಎಸ್ ನಾಡಗೌಡ ವಾಗ್ದಾಳಿ
ವಿಧಾನಸೌಧಕ್ಕೆ ಹೋದವರು ಕುದುರೆ ವ್ಯಾಪಾರ ಮಾಡುತ್ತಾರೆ. ಮುಂದೊಂದು ದಿನ ಕುದುರೆ ಎಂದುಕೊಂಡು ನಿಮ್ಮನ್ನೂ ಮಾರಿಬಿಡುತ್ತಾರೆ ಎಚ್ಚರದಿಂದ ಇರಿ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ಧ ಮಾಜಿ ಶಾಸಕ ಸಿ ಎಸ್ ನಾಡಗೌಡ ಲೇವಡಿ ಮಾಡಿದರು.