ವಿಜಯಪುರ: ಆರು ತಿಂಗಳ ಪಿಂಚಣಿ ಹಣವನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೊರೊನಾ ವೈರಸ್ ಹೋರಾಟ: ಪಿಂಚಣಿ ಹಣ ನೀಡಿದ ಮಾಜಿ ಸಚಿವ - Former minister who give pension to CM Disaster Relief Fund
ರಾಜ್ಯದಲ್ಲಿ ಕೊರೊನಾ ವೈರಸ್ ತಡೆಯಲು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ತಮ್ಮ 6 ತಿಂಗಳ ಪಿಂಚಣಿ ಹಣ 3 ಲಕ್ಷ ರೂ. ಗಳನ್ನ ಸಿಎಂ ವಿಪತ್ತು ಪರಿಹಾರ ನಿಧಿಗೆ ನೀಡಿದರು.
ಸಿಎಂ ವಿಪತ್ತು ಪರಿಹಾರ ನಿಧಿಗೆ ಹಣ ನೀಡಿದ ಮಾಜಿ ಸಚಿವ
ಕೊರೊನಾ ವೈರಸ್ ಆತಂಕ ಹೆಚ್ಚಾಗಿ ದೇಶದಲ್ಲಿ ಎರಡನೇ ಹಂತದ ಲಾಕ್ ಡೌನ್ ಆರಂಭವಾಗಿದೆ. ಸಾರ್ವಜನಿಕರು ಕೋವಿಡ್-19 ವೈರಾಣುವಿನಿಂದ ಸಂಕಷ್ಟಕ್ಕೆ ಸಿಲುಸಿದ್ದಾರೆ. ರಾಜ್ಯದಲ್ಲಿ ಕೊರೊನಾ ವೈರಸ್ ತಡೆಯಲು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ತಮ್ಮ ಆರು ತಿಂಗಳ ಪಿಂಚಣಿ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ತರಳಿದ ಮಾಜಿ ಸಚಿವ 6 ತಿಂಗಳ 3 ಲಕ್ಷ ಹಣವನ್ನ ಸಿಎಂ ವಿಪತ್ತು ಪರಿಹಾರ ನಿಧಿಗೆ ನೀಡಿದರು.