ವಿಜಯಪುರ: ಜೆಡಿಎಸ್ ಮುಖಂಡ ಹೆಚ್.ಡಿ.ರೇವಣ್ಣ ವಿರುದ್ಧ ಮಾಜಿ ಸಚಿವ ಶಿವಾನಂದ ಪಾಟೀಲ್ ಅಸಮಾಮಧಾನ ವ್ಯಕ್ತಪಡಿಸಿದ್ದಾರೆ.
ಹೆಚ್.ಡಿ.ರೇವಣ್ಣ ವಿರುದ್ಧ ಮಾಜಿ ಸಚಿವ ಶಿವಾನಂದ ಪಾಟೀಲ್ ಅಸಮಾಧಾನ - ಹೆಚ್.ಡಿ. ರೇವಣ್ಣ
ಹೆಚ್.ಡಿ.ರೇವಣ್ಣ ಸರಿಯಾದ ಸಹಕಾರ ನೀಡದ ಕಾರಣ ಸರ್ಕಾರಕ್ಕೆ ಈ ಪರಿಸ್ಥಿತಿ ಎದುರಾಗಿದ್ದು, ಅಲ್ಲದೇ ಅವರು ನನ್ನ ಇಲಾಖೆಯಲ್ಲೂ ಕೈ ಹಾಕಿರುವುದು ಸಾಕಷ್ಟು ನೋವು ತಂದಿದೆ ಎಂದು ಮಾಜಿ ಸಚಿವ ಶಿವಾನಂದ ಪಾಟೀಲ್ ಅಸಮಾಧಾನ ಹೊರಹಾಕಿದರು.
ನಗರದಲ್ಲಿ ಮಾತನಾಡಿದ ಅವರು, ಜೆಡಿಎಸ್ ನಾಯಕರು ಬಿಜೆಪಿಗೆ ಬಾಹ್ಯ ಬೆಂಬಲ ನೀಡಿದರೆ ಆಶ್ಚರ್ಯ ಪಡುವ ಅವಶ್ಯಕತೆ ಇಲ್ಲ. ರೇವಣ್ಣ ಸರಿಯಾದ ಸಹಕಾರ ನೀಡದ ಕಾರಣ ಸರ್ಕಾರಕ್ಕೆ ಈ ರೀತಿಯಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸರಿಯಾದ ರೀತಿಯಲ್ಲಿ ಸಭೆ ಮಾಡಲಿಲ್ಲ. ನಮ್ಮ ನಾಯಕರೂ ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಕಾರಣಕ್ಕೆ ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಕೊರತೆ ಎದ್ದು ಕಂಡು ಸರಿಯಾಗಿ ಸರ್ಕಾರ ನಡೆಯದ ಕಾರಣ ಈ ಸ್ಥಿತಿಗೆ ಕಾರಣವಾಯಿತು ಎಂದರು.
ರೇವಣ್ಣ ನನ್ನ ಇಲಾಖೆಯಲ್ಲೂ ಕೈ ಹಾಕಿದ್ದಾರೆ. ಇದು ಸಾಕಷ್ಟು ನೋವು ತಂದಿದೆ. ನಾನು ಈ ಬಗ್ಗೆ ನಮ್ಮ ನಾಯಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ನನಗೂ ರೇವಣ್ಣ ವಿರುದ್ಧ ಅಸಮಾಧಾನ ಇದೆ. ಕೆಎಂಎಫ್ ಅಧ್ಯಕ್ಷ ಸ್ಥಾನ ನಮ್ಮ ಪಕ್ಷಕ್ಕೆ ನೀಡಬೇಕು ಎಂದು ಹಿರಿಯ ನಾಯಕರು ಒಪ್ಪಂದ ಮಾಡಿಕೊಂಡಿದ್ದರು. ಆದ್ರೆ ಇದೀಗ ರೇವಣ್ಣ ಅವರು ಈ ರೀತಿ ಮಾಡುವುದು ತಪ್ಪು ಎಂದರು.