ಕರ್ನಾಟಕ

karnataka

ETV Bharat / state

ಸೋಂಕಿತನೊಂದಿಗೆ ಸಂಪರ್ಕ: ಮಾಜಿ ಸಚಿವ ಎಂ ಬಿ ಪಾಟೀಲ ಹೋಂ​ ಕ್ವಾರಂಟೈನ್​ - ಕೊರೊನಾ ಸುದ್ದಿ,

ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕೊರೊನಾ ವ್ಯಕ್ತಿಯ ಜೊತೆ ಸಂಪರ್ಕ ಹೊಂದಿರುವ ಹಿನ್ನೆಲೆ ಮಾಜಿ ಸಚಿವ ಎಂ.ಬಿ. ಪಾಟೀಲ ಹೋಂ​ ಕ್ವಾರಂಟೈನ್​ ಆಗಿದ್ದಾರೆ.

MB Patil Home quarantine, Former minister MB Patil Home quarantine, Former minister MB Patil Home quarantine news, corona uadate, vijayapur corona update, ಎಂಬಿ ಪಾಟೀಲ ಹೋಮ್​ ಕ್ವಾರಂಟೈನ್​, ಎಂಬಿ ಪಾಟೀಲ ಹೋಮ್​ ಕ್ವಾರಂಟೈನ್​ ಸುದ್ದಿ, ಮಾಜಿ ಸಚಿವ ಎಂಬಿ ಪಾಟೀಲ ಹೋಮ್​ ಕ್ವಾರಂಟೈನ್​, ಕೊರೊನಾ ಸುದ್ದಿ, ವಿಜಯಪುರ ಕೊರೊನಾ ಸುದ್ದಿ,
ಮಾಜಿ ಸಚಿವ ಎಂಬಿ ಪಾಟೀಲ ಹೋಮ್​ ಕ್ವಾರಂಟೈನ್​

By

Published : Aug 19, 2020, 12:12 PM IST

ವಿಜಯಪುರ: ಮಾಜಿ ಗೃಹ ಸಚಿವ, ಹಾಲಿ ಶಾಸಕ ಡಾ. ಎಂ.ಬಿ. ಪಾಟೀಲ ಈಗ ಹೋಂ ಕ್ವಾರಂಟೈನ್ ಒಳಗಾಗಿದ್ದಾರೆ.

ವೈದ್ಯರ ಸಲಹೆ ಮೇರೆಗೆ ತಮ್ಮ ನಿವಾಸದಲ್ಲಿ ಹೋಂ ಕ್ವಾರಂಟೈನ್​ನಲ್ಲಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಎಂ.ಬಿ. ಪಾಟೀಲ ಪೋಸ್ಟ್ ಹಾಕಿದ್ದಾರೆ.

ದೈನಂದಿನ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೊರೊನಾ ಸೊಂಕು ದೃಢಪಟ್ಟಿರುವ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಒಂದು ವಾರದ ಮಟ್ಟಿಗೆ ನಾನು ಹೋಂ ಕ್ವಾರಂಟೈನ್ ಆಗುತ್ತಿದ್ದೇನೆ ಎಂದು ಟ್ವಿಟ್ಟರ್​ ಮೂಲಕ ತಿಳಿಸಿದ್ದಾರೆ.

ಕ್ಷೇತ್ರದ ಜನರು ತುರ್ತು ಸಂದರ್ಭಗಳಲ್ಲಿ ತಮ್ಮ ಆಪ್ತ ಸಹಾಯಕರನ್ನು ಸಂಪರ್ಕಿಸುವಂತೆ ಪಾಟೀಲ ಮನವಿ ಮಾಡಿದ್ದಾರೆ.

ABOUT THE AUTHOR

...view details