ETV Bharat Karnataka

ಕರ್ನಾಟಕ

karnataka

ETV Bharat / state

ದೇವರಾಜ ಅರಸು ಒಡನಾಡಿ, ಕಾಂಗ್ರೆಸ್​ನ ಮಾಜಿ ಶಾಸಕ ಎಂ.ಎಂ.ಸಜ್ಜನ ವಿಧಿವಶ - ಮಾಜಿ ಶಾಸಕ ಮುರಿಗೆಪ್ಪ ಮಲ್ಲಪ್ಪ ಸಜ್ಜನ ನಿಧನ

ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಕಾಂಗ್ರೆಸ್​ ಪಕ್ಷದ ಮಾಜಿ ಶಾಸಕ ಎಂ.ಎಂ ಸಜ್ಜನ (98) ಇಂದು‌‌ ನಸುಕಿನ ಜಾವ ವಿಧಿವಶರಾಗಿದ್ದಾರೆ.

Former Congress MLA MM Sajjan
ಕಾಂಗ್ರೆಸ್ ಮಾಜಿ ಶಾಸಕ ಎಂ.ಎಂ.ಸಜ್ಜನ
author img

By

Published : Feb 1, 2022, 8:54 AM IST

Updated : Feb 1, 2022, 9:57 AM IST

ಮುದ್ದೇಬಿಹಾಳ(ವಿಜಯಪುರ):ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜು ಅರಸು ಒಡನಾಡಿ, ಮಾಜಿ ಶಾಸಕ ಮುರಿಗೆಪ್ಪ ಮಲ್ಲಪ್ಪ ಸಜ್ಜನ (98) ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.

ಮಾಜಿ ಶಾಸಕ ಎಂ.ಎಂ.ಸಜ್ಜನ ಅವರ ಒಡನಾಟವನ್ನು ಸ್ಮರಿಸಿದ ಸ್ಮೇಹಿತರು

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮುದ್ದೇಬಿಹಾಳ ಪಟ್ಟಣದ ಹೊರಪೇಟೆ ಗಲ್ಲಿಯಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಬೆಳಗಿನ ಜಾವ 1.30ಕ್ಕೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ಪುತ್ರ ಹಾಗೂ ಮೂವರು ಪುತ್ರಿಯರಿದ್ದಾರೆ. ಮುದ್ದೇಬಿಹಾಳ ಮತಕ್ಷೇತ್ರದಲ್ಲಿ1972-78 ರ ಅವಧಿಯಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಜತೆಗೆ ಮುದ್ದೇಬಿಹಾಳ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಇವರು ಸೇವೆ ಸಲ್ಲಿಸಿದ್ದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಮುದ್ದೇಬಿಹಾಳ ತಾಲೂಕಿನ ತಂಗಡಗಿ-ಧನ್ನೂರ ಸಂಪರ್ಕಿಸುವ ಪುರಾತನ ಸೇತುವೆ, ಮುದ್ದೇಬಿಹಾಳದ ಹಳೆಯ ಬಸ್ ನಿಲ್ದಾಣ ಸೇರಿದಂತೆ ಹಲವು ಮಹತ್ವದ ಸಾಧನೆಗಳನ್ನು ತಮ್ಮ ಅವಧಿಯಲ್ಲಿ ಕೈಗೊಂಡಿದ್ದರು.

ಇದನ್ನೂ ಓದಿ:ತಳವಾರ ಪರಿವಾರಕ್ಕೆ ಮೀಸಲಾತಿ.. ಪಂಚಮಸಾಲಿಗೆ ಏಕಿಲ್ಲ: ಜಯಮೃತ್ಯುಂಜಯ ಸ್ವಾಮೀಜಿ ಪ್ರಶ್ನೆ

Last Updated : Feb 1, 2022, 9:57 AM IST

ABOUT THE AUTHOR

...view details